ADVERTISEMENT

ಬಸವನಬಾಗೇವಾಡಿ | ಗಣರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 5:14 IST
Last Updated 27 ಜನವರಿ 2026, 5:14 IST
ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿ ಎನ್‌ಟಿಪಿಸಿಯಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಯೋಜನೆಯ ಮುಖ್ಯಸ್ಥ ಮಧು ಎಸ್. ಹಾಗೂ ಹಿರಿಯ ಅಧಿಕಾರಿಗಳು ಕ್ರೀಡಾಂಗಣದಲ್ಲಿ ತ್ರಿವರ್ಣದ ಬಲೂನ್ ಗಳನ್ನು ಗಾಳಿಯಲ್ಲಿ‌ ಹಾರಿಬಿಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದರು
ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿ ಎನ್‌ಟಿಪಿಸಿಯಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಯೋಜನೆಯ ಮುಖ್ಯಸ್ಥ ಮಧು ಎಸ್. ಹಾಗೂ ಹಿರಿಯ ಅಧಿಕಾರಿಗಳು ಕ್ರೀಡಾಂಗಣದಲ್ಲಿ ತ್ರಿವರ್ಣದ ಬಲೂನ್ ಗಳನ್ನು ಗಾಳಿಯಲ್ಲಿ‌ ಹಾರಿಬಿಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದರು   

ಬಸವನಬಾಗೇವಾಡಿ: ತಾಲ್ಲೂಕಿನ ಕೂಡಗಿ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರದಿಂದ ಮಹಾಶಕ್ತಿ ನಗರದಲ್ಲಿರುವ ನೇತಾಜಿ ಸುಭಾಸ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಸೋಮವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.‌

ಎನ್‌ಟಿಪಿಸಿ ಯೋಜನೆಯ ಮುಖ್ಯಸ್ಥ ಮಧು ಎಸ್.‌ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಯೋಜನೆಯ ಇತರೆ ಹಿರಿಯ ಅಧಿಕಾರಿಗಳೊಂದಿಗೆ‌ ತ್ರಿವರ್ಣ ಬಲೂನ್‌ಗಳನ್ನು ಗಾಳಿಯಲ್ಲಿ ಹಾರಿಬಿಡುವ ಮೂಲಕ ಗಣರಾಜ್ಯೋತ್ಸವ ಸಂಭ್ರಮ ಇಮ್ಮಡಿಗೊಳಿಸಿದರು.

ಸಿಐಎಸ್ಎಫ್ ತಂಡ, ಅಗ್ನಿಶಾಮಕ ವಿಭಾಗದ ತಂಡ, ಡಿಜಿಆರ್ ರಕ್ಷಣಾ ತಂಡ ಹಾಗೂ ಬಾಲಭಾರತಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಿಐಎಸ್ಎಫ್ ತಂಡದ ತ್ರಿವರ್ಣ ಧ್ವಜ ಪ್ರದರ್ಶನ ಮತ್ತು ಬಾಲಭಾರತಿ ಪಬ್ಲಿಕ್ ಶಾಲೆ, ಕಿಲ್ಕರಿ ಪ್ಲೇ ಸ್ಕೂಲ್ ಹಾಗೂ ಬಾಲಭವನದ ಮಕ್ಕಳ ದೇಶಭಕ್ತಿ ಗೀತೆಗಳ ನ್ಯತ್ಯಗಳ ಪ್ರದರ್ಶನ ಹಾಗೂ ನಾನಾ ಸಾಂಸ್ಕೃತಿ ಕಾರ್ಯಕ್ರಮ ಜರುಗಿದವು. 

ADVERTISEMENT

ಗೌರವ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಕೂಡಗಿ ಎನ್‌ಟಿಪಿಸಿ ಯೋಜನೆಯ ಮುಖ್ಯಸ್ಥ ಮಧು ಎಸ್., ಎನ್‌ಟಿಪಿಸಿ ಬೆಳದು ಬಂದ ಹಾದಿ ಹಾಗೂ ದೇಶದ ಪ್ರಗತಿಗೆ ಎನ್‌ಟಿಪಿಯ ನೀಡುತ್ತಿರುವ ಕೊಡುಗೆ ತಿಳಿಸಿದರು.

ಎನ್‌ಟಿಪಿಸಿ ವಿದ್ಯುತ್ ಉತ್ಪಾದನಾ ಕಾರ್ಯದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ವಿವಿಧ ಏಜನ್ಸಿಗಳ ಗುತ್ತಿಗೆ ಕಾರ್ಮಿಕರು ಹಾಗೂ ಘಟಕದ ನೌಕರರಿಗೆ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಿದರು. ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ‘ಯೋಜನಾ ಮುಖ್ಯಸ್ಥರ ವಿಶಿಷ್ಟ ಸೇವಾ ಪುರಸ್ಕಾರ’ಗಳನ್ನು ಪ್ರದಾನ ಮಾಡಿದರು.

ಎನ್‌ಟಿಪಿಸಿ (ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗ) ಪ್ರಧಾನ ವ್ಯವಸ್ಥಾಪಕ ಸಂತೋಷ್ ತಿವಾರಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಸ್.ವಿ.ಡಿ. ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.