ADVERTISEMENT

ಕೂಡು ರಸ್ತೆ ಅಭಿವೃದ್ಧಿಗೆ ₹2 ಕೋಟಿ: ಸಿ.ಎಸ್. ನಾಡಗೌಡ ಅಪ್ಪಾಜಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:13 IST
Last Updated 17 ಜನವರಿ 2026, 6:13 IST
ತಾಳಿಕೋಟೆ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಈಚೆಗೆ ಭೂಮಿಪೂಜೆ ನೆರವೇರಿಸಿದರು
ತಾಳಿಕೋಟೆ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಈಚೆಗೆ ಭೂಮಿಪೂಜೆ ನೆರವೇರಿಸಿದರು   

ತಾಳಿಕೋಟೆ: ‘ತಾಲ್ಲೂಕಿನ ಬಳಗಾನೂರದಿಂದ ಮಿಣಜಗಿ ಕೂಡು ರಸ್ತೆ ಅಭಿವೃದ್ಧಿಗೆ ಈಗಾಗಲೇ ₹2 ಕೋಟಿ ಅನುದಾನ ಕಾಯ್ದಿರಿಸಲಾಗಿದ್ದು, ಇದು ಟೆಂಡರ್ ಹಂತದಲ್ಲಿದೆ. ಆದಷ್ಟು ಬೇಗ ಆರಂಭಿಸಲಾಗುವುದು’ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.

ಬಳಗಾನೂರಿನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ₹2.10 ಕೋಟಿ ಅನುದಾನದಲ್ಲಿ ಕೊಣ್ಣೂರವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಎರಡು ವರ್ಷಗಳಲ್ಲಿ ₹200 ಕೋಟಿ ಅನುದಾನ ನೀಡಿದ್ದೇನೆ. ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂಬುದಾಗಿ ಕೆಲವರು ರಾಜಕಾರಣಕ್ಕಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಯಾರೇ ಮಾಡಿದರೂ ವಿರೋಧಿಸುವುದಿಲ್ಲ. ರಾಜಕಾರಣವು ಚುನಾವಣೆಗೆ ಸೀಮಿತವಾಗಿರಬೇಕು, ಅಭಿವೃದ್ಧಿ ಕಾರ್ಯಗಳಿಗಲ್ಲ’ 

ADVERTISEMENT

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಯ್ಯ ಹಿರೇಮಠ, ನಿಂಗನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಬಸನಗೌಡ ಬಗಲಿ, ಮಲ್ಲಣ್ಣ ದೋರನಹಳ್ಳಿ, ಚೆನ್ನಣ್ಣ ಅಲದಿ, ಶಿವಣ್ಣ ಕಡಕೋಳ, ನಿವೃತ್ತ ಶಿಕ್ಷಕ ಹೂಗಾರ, ಪಿಕೆಪಿಎಸ್ ಅಧ್ಯಕ್ಷ ನೀಲಪ್ಪ ನರಸಣಗಿ, ಮಲ್ಲನಗೌಡ ಬಿರಾದಾರ, ಸಂಗನಗೌಡ ಅಸ್ಕಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.