ADVERTISEMENT

ಬಿ.ಎಲ್‌.ಡಿ.ಇ ಸಂಸ್ಥೆಯಿಂದ ₹ 50 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 13:48 IST
Last Updated 4 ಏಪ್ರಿಲ್ 2020, 13:48 IST
ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ಅವರು ಕೋವಿಡ್-19 ಸಂಕಷ್ಟಕ್ಕೆ ನೆರವಾಗಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್‍ ಅವರಿಗೆ ₹ 50 ಲಕ್ಷ ದೇಣಿಗೆಯ ಚೆಕ್ ಅನ್ನು  ಶನಿವಾರ ನೀಡಿದರು
ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ಅವರು ಕೋವಿಡ್-19 ಸಂಕಷ್ಟಕ್ಕೆ ನೆರವಾಗಲು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್‍ ಅವರಿಗೆ ₹ 50 ಲಕ್ಷ ದೇಣಿಗೆಯ ಚೆಕ್ ಅನ್ನು  ಶನಿವಾರ ನೀಡಿದರು   

ವಿಜಯಪುರ: ಕೋವಿಡ್-19 ಸಂಕಷ್ಟಕ್ಕೆ ನೆರವಾಗಲು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆ ₹ 50 ಲಕ್ಷ ದೇಣಿಗೆ ನೀಡಿದೆ.

ಬಿ.ಎಲ್.ಡಿ.ಇ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ಅವರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್‍ ಅವರಿಗೆ ಶನಿವಾರ ಚೆಕ್ ನೀಡಿದರು.

ಕೊರೊನಾ ಸೋಂಕು ಅಪಾಯಕಾರಿಯಾಗಿ ಎಲ್ಲೆಡೆ ಹರಡುತ್ತಿದ್ದು, ಈ ಕಾಯಿಲೆಯಿಂದ ಸಾವಿರಾರು ಜನ ತೊಂದರೆಗಿಡಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕಾಯಿಲೆಯನ್ನು ಹತ್ತಿಕ್ಕಲು ಶ್ರಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ ವತಿಯಿಂದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ₹25ಲಕ್ಷ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 25 ಲಕ್ಷ ನೀಡಲಾಗಿದೆ ಎಂದು ಎಂ.ಬಿ.ಪಾಟೀಲ ಹೇಳಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರವಿಶಂಕರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌, ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕರಾದ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಸಂಗು ಸಜ್ಜನ, ವಿ.ಎಸ್.ಪಾಟೀಲ್ ಬಬಲೇಶ್ವರ, ಎಂ.ಎಸ್.ಹಿರೇಮಠ ಹಾಗೂ ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಡಾ.ಮಹಾಂತೇಶ ಬಿರಾದಾರ, ಎಸ್.ಎ.ಬಿರಾದಾರ ಕನ್ನಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.