ಆಲಮೇಲ: ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ವಿವಿಧ ದುರಸ್ತಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಬಿಲ್ ಪಾವತಿ ಮಾಡುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮೀಪದ ಕಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಗುತ್ತಿಗೆದಾರ ಕಾಶಿನಾಥ ತೊರವಿ, ‘ದುರಸ್ತಿ ಕಾಮಗಾರಿ ನಡೆಸಿ ಹಲವು ತಿಂಗಳು ಕಳೆದರೂ ಬಿಲ್ ಪಾವತಿ ಆಗಿಲ್ಲ. ಕಾಮಗಾರಿ ನಡೆಸಿದವರು ಸಣ್ಣ ಗುತ್ತಿಗೆದಾರರಾಗಿದ್ದಾರೆ. ಮಕ್ಕಳ ಶುಲ್ಕ ಭರಿಸಲೂ ಆಗುತ್ತಿಲ್ಲ. ಬಿಲ್ ಪಾವತಿ ಆಗದಿದ್ದರೆ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ, ಶೀಘ್ರವೇ ಪಾವತಿಸಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್, ‘ಕಳೆದ ವರ್ಷದಿಂದ ಗುತ್ತಿಗೆದಾರರ ಹಣ ಪಾವತಿ ಬಾಕಿ ಇದ್ದು, ಹಿರಿತನದ ಆದಾರದ ಮೇಲೆ ಹಣ ಪಾವತಿಸಲಾಗುತ್ತದೆ’ ಎಂದು ಭರವದೆ ನೀಡಿದರು.
ಗುತ್ತಿಗೆದಾರರಾದ ಕಾಶಿನಾಥ ತೊರವಿ, ಡಿ.ಎಸ್. ಮುದೋಡಗಿ, ಡಿ.ಡಿ. ಬೊಮ್ಮಣಿ, ಗುಂಡು ಯಾಳವಾರ, ರಮೇಶ ದೇವರನಾವದಗಿ ಅಧೀಕ್ಷಕ ಎಂಜಿನಿಯರ್ ಮನೋಜಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.