ವಿಜಯಪುರ: ಬಂಜಾರಾ ಸಮುದಾಯಕ್ಕೆ ಮಾಜಿ ಸಚಿವ ಕೆ.ಟಿ ರಾಠೋಡ ಅವರ ಕೊಡುಗೆ ಅವಿಸ್ಮರಣೀಯ ಎಂದು ಜಿಲ್ಲಾ ಗೋರ್ ಸೀಕವಾಡಿ ಸಂಯೋಜಕ ನಾರಾಯಣ ಪವಾರ ಹೇಳಿದರು.
ನಗರದಲ್ಲಿ ಗೋರ್ ಸಿಕವಾಡಿ ಹಾಗೂ ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕೆ.ಟಿ ರಾಠೋಡ ಅವರ 96ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಜಾರಾ ಸಮಾಜ ಎಸ್‌ಸಿ ಪಟ್ಟಿಗೆ ಸೇರುವಲ್ಲಿ ಅವರ ಹೋರಾಟ ಮೈಲುಗಲ್ಲಾಗಿದೆ ಎಂದರು.
ಕೆ.ಟಿ ರಾಠೋಡ ಅವರು ಸಣ್ಣ ತಾಂಡಾದಲ್ಲಿ ಜನಿಸಿ, ದೇವರಾಜ ಅರಸು ಸಂಪುಟದಲ್ಲಿ ಮೀನುಗಾರಿಕೆ, ತೋಟಗಾರಿಕೆ ಹಾಗೂ ಸಮಾಜಕಲ್ಯಾಣ ಸಚಿವರಾಗಿ, ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು ಇತಿಹಾಸವೇ ಸರಿ ಎಂದರು.
ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ನಾಯಿಕ, ಸಹ ಸಂಯೋಜಕ ಸುರೇಶ ರಾಠೋಡ, ಬಾಬು ಚವ್ಹಾಣ, ಬಾಬು ಲಮಾಣಿ, ಪ್ರಕಾಶ ರಾಠೋಡ, ಸುರೇಖಾ ರಾಠೋಡ, ಸಂಗೀತಾ ನಾಯಕ, ರವಿ ಚವಾಣ, ಅರವಿಂದ ಪವಾರ, ನಾರಾಯಣ ನಾಯಕ, ಲತಾ ರಾಠೋಡ, ಮೋತಿಲಾಲ ಜಾಧವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.