ಹೊರ್ತಿ: ‘ಜಾತ್ರಾ ಮಹೋತ್ಸವವು ಭಕ್ತಿಯ ಸಂಕೇತವಾಗಿದೆ’ ಎಂದು ಇಂಚಗೇರಿ ಹಿರೇಮಠದ ರುದ್ರಮುನಿ ದೇವರು ಹೇಳಿದರು.
ಸಮೀಪದ ಇಂಚಗೇರಿ ಗಡಶೆಟ್ಟಿ ತೋಟದ ವಸತಿಪ್ರದೇಶದಲ್ಲಿ ಶುಕ್ರವಾರ ನಡೆದ ಲಕ್ಷ್ಮಿದೇವಿ ದೇವಸ್ಥಾನದ 8ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇವಸ್ಥಾನದ ಪೂಜಾರಿ ಕರಬಸಪ್ಪ ಅಕ್ಕಿ ಮಾತನಾಡಿ, ‘ಭಕ್ತಿಯಿಂದ ಲಕ್ಷ್ಮಿದೇವಿಯನ್ನು ಆರಾಧಿಸಿದರೆ ಸಕಲ ಸಂಪತ್ತು ಕರುಣಿಸುತ್ತಾಳೆ’ ಎಂದು ಹೇಳಿದರು.
ಮಲಕಂದೇವರ ಗುಡ್ಡದ ದೇವಸ್ಥಾನದಿಂದ 201 ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು.
ರವಿದಾಸ ಜಾಧವ, ಮಲ್ಲಿಕಾರ್ಜುನ ಓಂಕಾರಶೆಟ್ಟಿ, ಮಲ್ಲಣ್ಣ ಸಕ್ರಿ, ಸಿದ್ಧರಾಮ ಏಳಗಿ, ಗೈಬಿಸಾಬ್ ಬಾಬಾನಗರ, ಮಿಟ್ಟು ರಾಠೋಡ, ರಾಜು ಗಡಶೆಟ್ಟಿ, ಲಾಲೂ ರಾಠೋಡ, ಸಚಿನ್ ಗಡಶೆಟ್ಟಿ, ಸುಭಾಷ ಓಂಕಾರಶೆಟ್ಟಿ, ಸಚಿನ್ ರಾಠೋಡ, ರಾಜು ಏಳಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.