ವಿಜಯಪುರ: ಬಡ ಮಕ್ಕಳಿಗೆ ನವೋದಯ, ಕಿತ್ತೂರುರಾಣಿ ಚನ್ನಮ್ಮ, ಸೈನಿಕ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಾತಿ ಪರೀಕ್ಷೆಗಳಿಗೆ ಸಹಾಯಕವಾಗಲು ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು ಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಚ್.ಟಿ. ಬಿದರಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಎಲ್.ಎಚ್. ಬಿದರಿ ಹೇಳಿದರು.
ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.5 ರಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಯೋಜನವಾಗುವ ಸದುದ್ದೇಶದಿಂದ ಉಚಿತ ಶಿಕ್ಷಣ, ಊಟ ನೀಡಲಾಗುತ್ತಿದೆ. ಸಮಾಜದ ಕಟ್ಟ ಕಡೆಯ ಮಗುವಿಗೆ ಈ ಪ್ರಯೋಜನ ತಲುಪಬೇಕು. ಶಿಬಿರದಲ್ಲಿ ಮಕ್ಕಳ ಸರ್ವೋತಮುಖ ಅಭಿವೃದ್ಧಿಯೇ ನಮ್ಮ ಗುರಿ. ಮುಂಬರುವ ದಿನಗಳಲ್ಲಿ ಶಿಬಿರವನ್ನು ವಸತಿ ಸಹಿತ ಮಾಡುತ್ತೇವೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೂ ಸಹಾಯವಾಗಲಿದೆ ಎಂದರು.
ಶಾಲಾ ಮುಖ್ಯಶಿಕ್ಷಕ ಬಿ.ಸಿ.ಚಲವಾದಿ ಮಾತನಾಡಿ, ಸಮಾಜದಲ್ಲಿ ತಾವು ಬೆಳೆದು ಮತ್ತೊಬ್ಬರನ್ನು ಬೆಳೆಸಬೇಕು. ಆ ಸದುದ್ದೇಶದಿಂದ ಬೇಸಿಗೆ ಶಿಬಿರ ಪ್ರಾರಂಭಸಿದ್ದಾರೆ ಎಂದರು.
ಶಿಕ್ಷಕರಾದ ಸಂಗಮೇಶ ಅರ್ಜುಣಗಿ, ಪರಶುರಾಮ ಹೊನ್ನಕಸ್ತೂರಿ, ಎಂ.ಬಿ. ಕರಡಿ, ಎಸ್.ಬಿ. ಹಿರೇಮಠ, ಎಸ್.ಜಿ. ಬಿರಾದಾರ, ಎಸ್.ವ್ಹಿ. ಹುಗ್ಗಿ, ಬಿ.ಎಸ್. ಬೇನೂರ, ಪಿ.ಎಸ್ ದಂದರಗಿ, ವಿ.ಎಸ್. ಪತ್ತಾರ ಮುಂತಾದವರು ಇದ್ದರು.
ವಿಜಯಪುರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ. ನಂ5 ರಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಗುರುವಾರ ನಡೆದ ಉಚಿತ ಬೇಸಿಗೆ ಶಿಬಿರದಲ್ಲಿ ಡಾ.ಎಲ್.ಎಚ್ ಬಿದರಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.