ADVERTISEMENT

ವಿಜಯಪುರ: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 5:22 IST
Last Updated 5 ಸೆಪ್ಟೆಂಬರ್ 2020, 5:22 IST

ವಿಜಯಪುರ: ನಗರದ ಜ್ಯೋತಿ ಫ್ಯಾಕ್ಟರಿ ಎದುರು ಇರುವ ಎಸ್‌ಟಿವಿ ಪ್ಲಾಂಟ್‌ನಲ್ಲಿ 2017 ಫೆಬ್ರುವರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌, ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹ 25 ಸಾವಿರ ದಂಡ ವಿಧಿಸಿದೆ.

ಎಸ್‌ಟಿವಿ ಪ್ಲಾಂಟ್‌ನಲ್ಲಿ ಕಾರ್ಮಿಕರಾಗಿದ್ದ, ಮಧ್ಯಪ್ರದೇಶ ರಾಜ್ಯದ ಆರೋಪಿಗಳಾದ ವಿನೋದ ದಾಮಲೆ, ಶ್ಯಾಮ ಕಟೌತೆ ಎಂಬುವವರು ರಾಜೇಶ ಎಂಬಾತನನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ವೆಂಕಟೇಶ ಜೋಶಿ ಅವರು, ಅರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.

ADVERTISEMENT

ಸೆಷನ್ಸ್‌ ಕೋರ್ಟ್‌ನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಕೆ.ಕುಲಕರ್ಣಿ ಮತ್ತು ವನಿತಾ ಎಸ್‌.ಇಟಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.