ADVERTISEMENT

ತಾಳಿಕೋಟೆ | ಅಂಬೇಡ್ಕರ್‌ ಆದರ್ಶಗಳ ಪಾಲನೆ ಅಗತ್ಯ: ಚಾಲಕ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 13:40 IST
Last Updated 6 ಡಿಸೆಂಬರ್ 2023, 13:40 IST
ತಾಳಿಕೋಟೆ ಡಾ.ಅಂಬೇಡ್ಕರ್ ವೃತ್ತದ ಬಳಿಯ ಲುಂಬಿನಿ ಉದ್ಯಾನವನದಲ್ಲಿ ಮಹಾಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್ ಮಾತನಾಡಿದರು
ತಾಳಿಕೋಟೆ ಡಾ.ಅಂಬೇಡ್ಕರ್ ವೃತ್ತದ ಬಳಿಯ ಲುಂಬಿನಿ ಉದ್ಯಾನವನದಲ್ಲಿ ಮಹಾಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್ ಮಾತನಾಡಿದರು   

ತಾಳಿಕೋಟೆ. ಶತಶತಮಾನಗಳಿಂದ ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯನ್ನು ಬೇರು ಸಮೇತ ಕಿತ್ತುಹಾಕಿ ಸಾಮಾಜಿಕ ಸಮಾನತೆಯನ್ನು ತಂದು ಶೋಷಿತರ ಬದುಕಿಗೆ ಬೆಳಕನ್ನು ನೀಡಲು ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನ್ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರವರ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ವೃತ್ತದ ಬಳಿಯ ಲುಂಬಿನಿ ಉದ್ಯಾನವನದಲ್ಲಿ ಡಾ.ಅಂಬೇಡ್ಕರ್‌ 67ನೇಯ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ದಲಿತ ಯುವ ಮುಖಂಡ ಜೈ ಭೀಮ ಮುತ್ತಗಿ ಮಾತನಾಡಿದರು. ಪತ್ರಕರ್ತ ಬಸವರಾಜ್ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ADVERTISEMENT

ದಲಿತ ಮುಖಂಡರಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪೂರ, ನಾಗೇಶ್ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ಬಸ್ಸು ಮಾದರ, ಕರವೇ ಸಂಘಟನೆಯ ಅಬೂಬಕರ ಲಾಹೋರಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಿಆರ್‌ಪಿಗಳಾದ ರಾಜು ವಿಜಾಪೂರ, ಇಬ್ರಾಹಿಂ ಆಲಮೇಲ, ಪಿಎಸ್ಐ ಆರ್. ಎಸ್. ಭಂಗಿ, ಸಂಗಮೇಶ ಚಲವಾದಿ, ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ಎನ್.ವಿ.ಕೋರಿ, ಎಸ್.ಎಂ.ಕಲಬುರ್ಗಿ, ಎಸ್‌.ಎನ್.ಮಲ್ಲಾಡೆ, ನಾಗರಾಜ ಗುಡಗುಂಟಿ, ಮಂಜುನಾಥ ನರಸಣಗಿ, ಅನ್ನಪೂರ್ಣ ಪಾಟೀಲ, ಅಗ್ನಿಶಾಮಕ ದಳದ ಹುಸೇನ ಸಾಬ ಬುರಾನಗೋಳ, ಎನ್.ಎಚ್.ಅವಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.