ADVERTISEMENT

ಮಹಾಶಿವರಾತ್ರಿ: ಸಂಗೀತ ಸಂಧ್ಯಾ, ಹರಿಕಥೆ ನಾಳೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:50 IST
Last Updated 14 ಫೆಬ್ರುವರಿ 2026, 7:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸೋಲಾಪುರ: ನಗರದ ಹೊಟಗಿ ಮಠದಲ್ಲಿ ಮಹಾಶಿವರಾತ್ರಿ, ಜಗದ್ಗುರು ಪಂಡಿತಾರಾಧ್ಯ ಹಾಗೂ ವಿಶ್ವರಾಧ್ಯ ಜಯಂತಿ ಅಂಗವಾಗಿ ಫೆ.15ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಿಗ್ಗೆಯಿಂದಲೇ ಮಹಾಪೂಜೆ, ಲಘುರುದ್ರ, ಮಹಾನೈವೇದ್ಯ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಭಕ್ತಿಗೀತೆಗಳ ಸಂಗೀತ ಸಂಧ್ಯಾ ಹಾಗೂ ಹರಿಕಥೆ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

ಸಂಜೆ 7 ಗಂಟೆಗೆ ದೀಪೋತ್ಸವ ಹಾಗೂ ವೀರ ತಪಸ್ವಿ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ರಾತ್ರಿ 10 ಗಂಟೆಗೆ ಭಜನೆ ಹಾಗೂ ಜಾಗರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.