ADVERTISEMENT

ಸೊಪ್ಪು ರಸ್ತೆಗೆ ಎಸೆದಿದ್ದ ವಿಜಯಪುರ ರೆಬೆಲ್ ರೈತನಿಗೆ ಸಚಿವ ಮುನಿರತ್ನ ಪರಿಹಾರ

ತೋಟಗಾರಿಕೆ ಸಚಿವ ಮುನಿರತ್ನ ಅವರಿಂದ ವಿಡಿಯೊ ಕರೆ: ₹5 ಸಾವಿರ ಪರಿಹಾರ: ವೀಕೆಂಡ್ ಕರ್ಫ್ಯೂನಿಂದ ಸಿಟ್ಟಾಗಿದ್ದ ರೈತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 7:07 IST
Last Updated 18 ಜನವರಿ 2022, 7:07 IST
   

ವಿಜಯಪುರ: ತರಕಾರಿ ಮಾರಲು ಪೊಲೀಸರು ತಡೆಯೊಡ್ಡಿದ್ದರು ಎಂದು ಆರೋಪಿಸಿ ರಸ್ತೆ ಮೇಲೆ ಸೊಪ್ಪು ಎಸೆದು ಪ್ರತಿಭಟಿಸಿದ್ದ ಡೋಮನಾಳ ಗ್ರಾಮದ ರೈತ ಭೀಮನಗೌಡ ಬಿರಾದಾರಗೆ ತೋಟಗಾರಿಕೆ ಸಚಿವ ಮುನಿರತ್ನ ಸೋಮವಾರ ವಿಡಿಯೊ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

‘ಸಚಿವರು ನನ್ನೊಂದಿಗೆ ಮಾತನಾಡಿ ವಿಷಾದಿಸಿದಿರು. ಸರ್ಕಾರ ರೈತರ ಪರವಾಗಿದೆ. ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿ, ಪರಿಹಾರವಾಗಿ ₹ 5 ಸಾವಿರವನ್ನು ಫೋನ್‌ ಪೇ ಮೂಲಕ ನೀಡಿದರು’ ಎಂದು ರೈತ ಬಿರಾದಾರ ಹೇಳಿದರು.

ಘಟನೆಯ ವಿವರ: ವಾರಾಂತ್ಯ ಕರ್ಫ್ಯೂ ನಡುವೆ ನಗರದ ಗೋದಾವರಿ ಹೋಟೆಲ್‌ ಬಳಿ ಭಾನುವಾರ ಸಂತೆಯಲ್ಲಿ ಕಡಿಮೆ ದರಕ್ಕೆ ಸೊಪ್ಪು ಮಾರುತ್ತಿದ್ದು, ಗ್ರಾಹಕರು ಗುಂಪುಗೂಡಿದ್ದರು.

ADVERTISEMENT

ಜನರು ಗುಂಪುಗೂಡಿದ್ದನ್ನು ಕಂಡ ಪೊಲೀಸರು ಮಾರಾಟಕ್ಕೆ ತಡೆಯೊಡ್ಡಿದ್ದರು. ಇದರಿಂದ ರೈತ ಸೊಪ್ಪನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.