ADVERTISEMENT

ಮೊಬೈಲ್ ಫೋನ್‌ಗೆ ಮಕ್ಕಳು ದಾಸರಾಗದಿರಲಿ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:13 IST
Last Updated 17 ಜನವರಿ 2026, 6:13 IST
ತಾಳಿಕೋಟೆ ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಇಒ ಬಿ.ಎಸ್. ಸಾವಳಗಿ ಉದ್ಘಾಟಿಸಿದರು
ತಾಳಿಕೋಟೆ ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಇಒ ಬಿ.ಎಸ್. ಸಾವಳಗಿ ಉದ್ಘಾಟಿಸಿದರು   

ತಾಳಿಕೋಟೆ: ‘ಶಿಕ್ಷಣ ಸಂಸ್ಥೆಗಳು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಸಾಲದು, ಉತ್ತಮ ಸಂಸ್ಕಾರವನ್ನೂ ಕಲಿಸುವ ಅಗತ್ಯವಿದೆ’ ಎಂದು ಕೋಲಾರ–ಬೇಲೂರ ಹಿರೇಮಠದ ಪಟ್ಟದೇವರು ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ನಡೆದ ಬ್ರಿಲಿಯಂಟ್ ಕಲಾ ವೈಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮಕ್ಕಳು ಮೊಬೈಲ್ ಫೋನ್‌ಗೆ ದಾಸರಾಗದಂತೆ ಪೋಷಕರು ನೋಡಿಕೊಳ್ಳಬೇಕು. ಅವರ ಮೇಲೆ ನಿಗಾ ವಹಿಸುವುದರೊಂದಿಗೆ ಭೋಗದ ಜೀವನಕ್ಕೆ ಕಡಿವಾಣ ಹಾಕಬೇಕು. ಹೆತ್ತವರ ಪಾದಪೂಜೆ ನೆರವೇರಿಸುವುದು ಭಾರತೀಯ ಪರಂಪರೆಯ ಪ್ರತೀಕವಾಗಿದೆ’ ಎಂದರು.

ADVERTISEMENT

ಸಮಾರಂಭ ಉದ್ಘಾಟಿಸಿ ಮಾತನಾಡಿದ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ, ‘ಶಿಕ್ಷಣದಿಂದ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯ. ಸ್ವಾವಲಂಬಿ ಬದುಕಿಗೆ ಶಿಕ್ಷಣ ಅಗತ್ಯ’ ಎಂದರು.

ಸರ್ವಜ್ಞ ವಿದ್ಯಾಪೀಠದ ಅಧ್ಯಕ್ಷ ಸಿದ್ಧನಗೌಡ ಮಂಗಳೂರ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ, ಸಿಆರ್‌ಪಿ ರಾಜು ವಿಜಾಪುರ, ಸಂಸ್ಥೆಯ ನಿರ್ದೇಶಕ ಎಸ್.ಎಚ್. ಪಾಟೀಲ ಮಾತನಾಡಿದರು. ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ. ನಡುವಿನಮನಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ವಿನಾಯಕ್ ಪಟಗಾರ, ಶಿಕ್ಷಕ ಸಿದ್ದು ಕರಡಿ, ಶಿಕ್ಷಣ ಸಂಯೋಜಕ ಎಸ್.ಎಸ್. ಹಿರೇಮಠ, ಸಿಆರ್‌ಪಿ ರಾಜು ಮೂರಮಾನ, ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಆರ್.ಬಿ. ನಡುವಿನಮನಿ, ಕಾರ್ಯದರ್ಶಿ ಎಂ.ಬಿ. ಮಡಿವಾಳರ, ನಿರ್ದೇಶಕರಾದ ಶಶಿಧರ್ ಎಂ. ಬಿರಾದಾರ, ಲೀಲಾವತಿ ಬಿರಾದಾರ, ಎನ್.ಎಸ್. ಗಡಗಿ, ಬಿ.ಜಿ. ಕರಕಳ್ಳಿ,ಎ.ಎಂ. ಕೋಳ್ಯಾಳ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.