ADVERTISEMENT

ಸಿಂದಗಿ ಉಪಚುನಾವಣೆ: ನೀತಿಸಂಹಿತೆ ಮತಕ್ಷೇತ್ರಕ್ಕೆ ಸೀಮಿತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 3:30 IST
Last Updated 1 ಅಕ್ಟೋಬರ್ 2021, 3:30 IST
ಸಿಂದಗಿ ಉಪಚುನಾವಣೆ ಚುನಾವಣಾಧಿಕಾರಿ ರಾಹುಲ್ ಸಿಂಧೆ, ಸಹಾಯಕ ಚುನಾವಣಾಧಿಕಾರಿ ಸಂಜೀವಕುಮಾರ ದಾಸರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಿಂದಗಿ ಉಪಚುನಾವಣೆ ಚುನಾವಣಾಧಿಕಾರಿ ರಾಹುಲ್ ಸಿಂಧೆ, ಸಹಾಯಕ ಚುನಾವಣಾಧಿಕಾರಿ ಸಂಜೀವಕುಮಾರ ದಾಸರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.   

ಸಿಂದಗಿ: ಸಿಂದಗಿ ವಿಧಾನಸಭಾ ಉಪಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 1 ರಿಂದ ಪ್ರಾರಂಭವಾಗಿದೆ. ಚುನಾವಣಾ ನೀತಿ ಸಂಹಿತೆ ಮತಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಚುನಾವಣಾಧಿಕಾರಿಗಳಾದ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಹೇಳಿದರು.

ಇಲ್ಲಿಯ ಮಿನಿವಿಧಾನಸೌಧ ಆವರಣದ ಸಭಾಭವನದಲ್ಲಿ ಗುರುವಾರ ಸಂಜೆ ಸುದ್ದಿಗಾರರ ಜೊತೆಗೆ ಮಾತನಾಡಿದರು. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 297 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೋರಟಗಿ, ದೇವಣಗಾಂವ, ಗೋಲಗೇರಿ, ವಿಭೂತಿಹಳ್ಳಿ, ತಾಂಬಾ, ಕನ್ನೊಳ್ಳಿ, ಹಂದಿಗನೂರಲ್ಲಿ ಒಟ್ಟು 7 ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

22 ಜನ ಸೆಕ್ಟರ್ ಅಧಿಕಾರಿಗಳು 18 ಜನ ಜಾಗೃತದಳ ರಚನೆ ಮಾಡಲಾಗಿದೆ. ಮಿನಿವಿಧಾನಸೌಧ ಆವರಣದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಸಂಪರ್ಕಿಸಲು 08488 221235 ಸಹಾಯವಾಣಿ ಇದೆ. ಕೋವಿಡ್ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಚುನಾವಣಾ ರೋಡ್ ಷೋ ಗಳಿಗೆ ಅವಕಾಶವಿಲ್ಲ. ಮಾದರಿ ನೀತಿ ಸಂಹಿತೆಗಾಗಿ ತಂಡ ರಚನೆ ಮಾಡಲಾಗಿದೆ. ಎಲ್ಲ ರಾಜಕೀಯ ಪ್ರತಿನಿಧಿಗಳು ಕಟ್ಟುನಿಟ್ಟಿನ ನೀತಿ ಸಂಹಿತೆ ಪಾಲಿಸಬೇಕು ಎಂದರು ತಿಳಿಸಿದರು.

ADVERTISEMENT

ಸಹಾಯಕ ಚುನಾವಣಾಧಿಕಾರಿ ಸಂಜೀವಕುಮಾರ ದಾಸರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.