ADVERTISEMENT

‘ಶರಣರ ಶಕ್ತಿ’ ಸಿನಿಮಾ ಬಿಡುಗಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:06 IST
Last Updated 8 ಅಕ್ಟೋಬರ್ 2024, 16:06 IST
ಮುದ್ದೇಬಿಹಾಳದಲ್ಲಿ ಬಸವ ಮಹಾಮನೆ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಸಾಹಿತಿ ಅಬ್ದುಲ್‌ ರೆಹಮಾನ ಬಿದರಕುಂದಿ ಮಾತನಾಡಿದರು
ಮುದ್ದೇಬಿಹಾಳದಲ್ಲಿ ಬಸವ ಮಹಾಮನೆ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಸಾಹಿತಿ ಅಬ್ದುಲ್‌ ರೆಹಮಾನ ಬಿದರಕುಂದಿ ಮಾತನಾಡಿದರು   

ಮುದ್ದೇಬಿಹಾಳ: ‘ಶರಣರ ಶಕ್ತಿ’ ಸಿನಿಮಾ ಬಿಡುಗಡೆಗೆ ನಿರ್ಬಂಧ ವಿಧಿಸಬೇಕು ಹಾಗೂ ‘ವಚನ ದರ್ಶನ’ ಕೃತಿಗೆ ಮುಟ್ಟುಗೋಲು ಹಾಕಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಬಸವ ಮಹಾಮನೆ ಸಮಿತಿ ಹಾಗೂ ಶರಣ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಮಂಗಳವಾರ ಉಪತಹಶೀಲ್ದಾರ್ ಗುರುರಾಜ ಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಿರ್ದೇಶಕ ದಿಲೀಪ್ ಶರ್ಮಾ, ನಿರ್ಮಾಪಕಿ ಆರಾಧನಾ ಕುಲಕರ್ಣಿ ನಿರ್ಮಿಸಿರುವ ‘ಶರಣರ ಶಕ್ತಿ’ ಸನಿಮಾ ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿದೆ. ಅದನ್ನು ಮರು ಸೆನ್ಸಾರ್ ಮಾಡುವವರೆಗೆ ಬಿಡುಗಡೆ ಅವಕಾಶ ನೀಡಬಾರದು. ಅಕ್ಕ ನಾಗಮ್ಮಗೆ ಅವಹೇಳನ ಮಾಡಿರುವ ಚಿತ್ರತಂಡದ ಮೇಲೆ ಕ್ರಿಮಿನಲ್ ಮೊಕದಮೆ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾಹಿತಿ ಅಬ್ದುಲ್‌ ರೆಹಮಾನ್ ಬಿದರಕುಂದಿ ಮಾತನಾಡಿ, ‘ಬಸವಾದಿ ಶರಣರ ತತ್ವಗಳ ಮೇಲಿನ ದಾಳಿ ಹೆಚ್ಚುತ್ತಿದೆ. 
ಎರಡು ನಿಮಿಷದ ‘ಶರಣರಶಕ್ತಿ’ ಸಿನಿಮಾ ಟ್ರೈಲರ್‌ನಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಂಶಗಳಿವೆ. ಬಸವಾದಿ ಶರಣರಿಗೆ ಅವಮಾನ ಮಾಡುವ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಇಂತಹ ತಪ್ಪನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಅಕ್ಟೋಬರ್ 18ರಂದು ಸಿನಿಮಾ ಬಿಡುಗಡೆ ಮಾಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

ನಿವೃತ್ತ ಶಿಕ್ಷಕ ಬಿ.ವಿ.ಕೋರಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವರಾಜ ನಾಲತವಾಡ, ಪ್ರಮುಖರಾದ ಅಶೋಕ ಮಣಿ, ಎಸ್.ಬಿ.ಕನ್ನೂರ, ಚಂದ್ರಶೇಖರ ಇಟಗಿ, ಅಶೋಕ ನಾಡಗೌಡ, ಪ್ರತಿಭಾ ಅಂಗಡಗೇರಿ, ಮಹಾದೇವಿ ವಾಲಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸಂಗಣ್ಣ ಶಿವಣಗಿ, ವಕೀಲ ಎನ್.ಆರ್. ಮೊಕಾಶಿ, ಎಂ.ವಿ. ಮಾಟಲದಿನ್ನಿ, ಬಿ.ಎಸ್.ಮೇಟಿ, ವೆಂಕನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.