ADVERTISEMENT

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ: ರೇವಣಸಿದ್ದೇಶ್ವರ ಶ್ರೀ

ಖಿಲಾರಹಟ್ಟಿಯಲ್ಲಿ ಬೀರಲಿಂಗೇಶ್ವರ, ಕಾಡಸಿದ್ದೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:49 IST
Last Updated 15 ಏಪ್ರಿಲ್ 2024, 15:49 IST
ಮುದ್ದೇಬಿಹಾಳ ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಸೋಮವಾರ ಕಾಡಸಿದ್ಧೇಶ್ವರ ಹಾಗೂ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 11 ಜೋಡಿ ನವಜೀವನಕ್ಕೆ ಕಾಲಿರಿಸಿದವು
ಮುದ್ದೇಬಿಹಾಳ ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಸೋಮವಾರ ಕಾಡಸಿದ್ಧೇಶ್ವರ ಹಾಗೂ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 11 ಜೋಡಿ ನವಜೀವನಕ್ಕೆ ಕಾಲಿರಿಸಿದವು   

ಮುದ್ದೇಬಿಹಾಳ: ‘ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಅದರಿಂದ ಮದುವೆ ಖರ್ಚು ಉಳಿದು ಬಡವರಿಗೆ ಅನುಕೂಲವಾಗುತ್ತದೆ. ಸಾಮೂಹಿಕ ವಿವಾಹ ಬಡವರ ಮದುವೆಯಲ್ಲ ಅದು ಭಾಗ್ಯವಂತರ ಮದುವೆ’ ಎಂದು ಸರೂರು ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಸೋಮವಾರ ಕಾಡಸಿದ್ಧೇಶ್ವರ ಹಾಗೂ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಮಾಜ ಸೇವಕ ಎಂ.ಎನ್.ಮದರಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಡವರ ಸೇವೆಯನ್ನು ದೇವರ ಪೂಜೆ ಎಂದು ಮಾಡಿಕೊಂಡು ಬರುತ್ತಿರುವ ಮದರಿ ಕುಟುಂಬದ ಮೇಲೆ ಜನತೆಯ ಆಶೀರ್ವಾದ ಸದಾ ಇರಲಿ ಎಂದರು.

ADVERTISEMENT

ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ, ಪ್ರತಿ ವರ್ಷವೂ ಖಿಲಾರಹಟ್ಟಿಯಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿದ್ದೇವೆ. ಈ ಸಲ ಲೋಕಸಭಾ ಚುನಾವಣೆ ಬಂದಿರುವ ಕಾರಣ ಸರಳವಾಗಿ ಕಾರ್ಯಕ್ರಮ ಸಂಘಟಿಸಿದ್ದೇವೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿದೇರ್ಶಕಿ ಶ್ರೀದೇವಿ ಮದರಿ, ಮುಖಂಡರಾದ ಬಿ.ಎಲ್.ಮದರಿ, ಮಲ್ಲಣ್ಣ ಕೆಸರಟ್ಟಿ, ಸರೂರು ಶಿವಯ್ಯ ಗುರುವಿನ, ಖಿಲಾರಹಟ್ಟಿ ಕಾಡಸಿದ್ಧೇಶ್ವರ ಮಠದ ರಮಾನಂದ ಸ್ವಾಮೀಜಿ, ಸಿದ್ದಾಪೂರದ ಅರವಿಂದ ಸ್ವಾಮೀಜಿ, ಇತರರು ಇದ್ದರು.

ಬೀರಲಿಂಗೇಶ್ವರ ಹಾಗೂ ದಯಗೊಂಡ ಗೌಡ ಹಬ್ಬದ ಪ್ರದರ್ಶನ ಗಮನ ಸೆಳೆಯಿತು. 11 ಜೋಡಿಗಳು ನವಜೀವನಕ್ಕೆ ಕಾಲಿರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.