ಮುದ್ದೇಬಿಹಾಳ ಪಟ್ಟಣದ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಮಳೆಯಿಂದ ಗುಂಡಿ ಬಿದ್ದದ್ದನ್ನು ಬೇಕಾಬಿಟ್ಟಿ ದುರಸ್ತಿಗೆ ಮುಂದಾಗಿದ್ದನ್ನು ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಖಂಡಿಸಿದರು
ಮುದ್ದೇಬಿಹಾಳ: ಪಟ್ಟಣದ ಹುಡ್ಕೋದ ಕಿತ್ತೂರು ರಾಣಿ ಚನ್ನಮ್ಮ ದ್ವಾರದ ಎದುರಿಗೆ ಮಳೆಯಿಂದ ರಸ್ತೆಯು ಸಂಪೂರ್ಣ ಹಾಳಾಗಿ ಗುಂಡಿಗಳು ಬಿದ್ದು ವಾಹನ ಸಂಚಾರರಿಗೆ ತೊಂದರೆಯಾಗುತ್ತಿದ್ದು ಇದನ್ನು ಸರಿಪಡಿಸಲು ಮುಂದಾಗಿದ್ದ ಕೆ.ಆರ್.ಐ.ಡಿ.ಎಲ್ ಸಿಬ್ಬಂದಿಗೆ ಪಂಚಮಸಾಲಿ ಸಮಾಜದ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡು ಪ್ಯಾಚ್ ವರ್ಕ ಕೆಲಸಕ್ಕೆ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಹದಗೆಟ್ಟಿದ್ದ ವೃತ್ತದ ಸುತ್ತಮುತ್ತಲಿನ ರಸ್ತೆಯನ್ನು ದುರಸ್ತಿ ಮಾಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಪ್ಯಾಚ್ ವರ್ಕ್ ಮಾಡಲು ಬಂದ ಕಾರ್ಮಿಕರು ರಸ್ತೆಯಲಿದ್ದ ನೀರನ್ನು ಸ್ವಚ್ಛಗೊಳಿಸದೇ ನೀರಿನಲ್ಲಿಯೇ ಡಾಂಬರ್ ಹಾಕಲು ಮುಂದಾಗಿದ್ದನ್ನು ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಹಾಗೂ ಪುರಸಭೆ ಸದಸ್ಯ ವಿರೇಶ ಹಾಡಲಗೇರಿ, ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡು ಕೆಲಸ ನಿಲ್ಲಿಸಲು ಹೇಳಿದರು.
ಬಳಿಕ ಮೇಲಧಿಕಾರಿಗಳೊಂದಿಗೆ ಮಾತನಾಡಿ, ವೃತ್ತದಲ್ಲಿ ಆಗಿರುವ ತೆಗ್ಗು ಗುಂಡಿಗಳನ್ನು ಸರಿಯಾಗಿ ಪ್ರಮಾಣದಲ್ಲಿ ಡಾಂಬರ್ ಹಾಕಿ ಹುಡ್ಕೋ ಹಾಗೂ ಮುಖ್ಯ ರಸ್ತೆ ಹೊಂದುವಂತೆ ರಸ್ತೆ ಸರಿಪಡಿಸಬೇಕು ಎಂದು ಸೂಚಿಸಿದರು.ಮುಖಂಡರ ಆಕ್ರೋಶಕ್ಕೆ ಮಣಿದ ಕಾರ್ಮಿಕರು ಕೆಲಸ ಅರ್ಧದಲ್ಲಿ ಬಿಟ್ಟು ತೆರಳಿದರು. ಕಾಂಗ್ರೆಸ್ ಮುಖಂಡ ಹುಸೇನ್ ಮುಲ್ಲಾ ಕಾಳಗಿ, ಸಾಹೇಬಗೌಡ ಬಿರಾದಾರ, ಯಂಕಪ್ಪ ನಾಯಕಮಕ್ಕಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.