ADVERTISEMENT

ನಿಸರ್ಗದ ಬದಲಾವಣೆ ಮುನ್ಸೂಚನೆ ಯುಗಾದಿ: ನಿವೃತ್ತ ಡಿವೈಎಸ್‌ಪಿ ಬಸವರಾಜ ಚೌಕಿಮಠ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 15:32 IST
Last Updated 12 ಏಪ್ರಿಲ್ 2024, 15:32 IST
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುಗಾದಿ ಕಾವ್ಯ ಸಂಭ್ರಮ’ ಕಾರ್ಯಕ್ರಮವನ್ನು  ನಿವೃತ್ತ ಡಿವೈೆಎಸ್‌ಪಿ ಬಸವರಾಜ ಚೌಕಿಮಠ ಉದ್ಘಾಟಿಸಿದರು
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುಗಾದಿ ಕಾವ್ಯ ಸಂಭ್ರಮ’ ಕಾರ್ಯಕ್ರಮವನ್ನು  ನಿವೃತ್ತ ಡಿವೈೆಎಸ್‌ಪಿ ಬಸವರಾಜ ಚೌಕಿಮಠ ಉದ್ಘಾಟಿಸಿದರು   

ವಿಜಯಪುರ: ಸನಾತನ ಸಂಸ್ಕೃತಿಯ ಸಂವತ್ಸರದ ಆರಂಭದ ಹಬ್ಬವೆ ಯುಗಾದಿ, ಜನರು ನಿಸರ್ಗದಲ್ಲಾಗುವ ಬದಲಾವಣೆಯಿಂದಲೇ ಯುಗಾದಿ ಹಬ್ಬವನ್ನು ಗುರುತಿಸುತ್ತಾರೆ ಎಂದು ನಿವೃತ್ತ ಡಿವೈಎಸ್‌ಪಿ ಬಸವರಾಜ ಚೌಕಿಮಠ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುಗಾದಿ ಕಾವ್ಯ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೇವು ಬೆಲ್ಲದ ಸಂಕೇತವಾಗಿ, ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಯುಗಾದಿ ಹೇಳುವುದು ಅದರ ವೈಶಿಷ್ಟ್ಯವಾಗಿದೆ. ಕಾವ್ಯ ರಚಿಸುವ ಸಾಮಥ್ರ್ಯ ನಿರಂತರ ಅಧ್ಯಯನ ಶೀಲತೆಯಿಂದ ಮಾತ್ರ ಪಡೆಯಬಹುದಾಗಿದೆ ಎಂದು ಕಾವ್ಯ ವಾಚನ ಮಾಡಿದ ಕವಿಗಳ ಕುರಿತು ಹೇಳಿದರು.

ADVERTISEMENT

ಪತ್ರಕರ್ತ ಈರಣ್ಣ ಗೌಡರ ಮಾತನಾಡಿ, ಕವಿತೆ ಹುಡುಗಾಟವಲ್ಲ, ಅದೊಂದು ಹುಡುಕಾಟ. ಕವಿಯಾದವನು ನಿರಂತರ ಸಂಶೋಧಕನಾಗಿರಬೇಕು. ಸಮಾಜ ತಿದ್ದುವ ಕಾವ್ಯಗಳು ಇಂದು ಅತ್ಯಂತ ಅವಶ್ಯಕವಾಗಿವೆ. ಯುವ ಸಾಹಿತಿಗಳನ್ನು ಸಾಹಿತ್ಯದ ಮುಖ್ಯವಾಹಿನಿಗೆ ತರುವಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಜಿಲ್ಲಾದ್ಯಂತ ಎಲೆಮರೆಯ ಕಾಯಿಯಂತಿರುವ ಯುವ ಪ್ರತಿಭಾವಂತ ಕವಿಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ನೀಡುತ್ತಿರುವದು ಹೆಮ್ಮೆಯ ಸಂಗತಿ ಎಂದರು.

ಜ್ಯೋತಿ ಚೌಕಿಮಠ, ಗುರಣ್ಣ ಹಂಚನಾಳ, ಇಸಾಕ ಸಾರವಾಡ, ಅಭಿಷೇಕ ಚಕ್ರವರ್ತಿ, ಸುಭಾಶ್ಚಂದ್ರ ಕನ್ನೂರ, ಮಾಧವ ಗುಡಿ, ಸುರೇಶ ಜತ್ತಿ, ಹಾಸಿಂಪೀರ ವಾಲಿಕಾರ, ಸಂಗಮೇಶ ಮೇತ್ರಿ, ಕಮಲಾ ಮುರಾಳ, ರಾಜೇಸಾಬ ಶಿವನಗುತ್ತಿ, ಜಿ.ಎಸ್ ಬಳ್ಳೂರ, ರಜಾಕ ಮುಲ್ಲಾ, ಯಾಕೂಬ ನಾಟೀಕಾರ, ಲತಾ ಗುಂಡಿ, ಸತ್ಯಣ್ಣ ಹಡಪದ, ಅವಿನಾಶ ದನ್ಯಾಳ, ಅಣ್ಣುಗೌಡ ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.