
ವಿಜಯಪುರ: ‘ಸಾವಿರ ದಿನಗಳ ಸಾಧನೆ’ ಎಂದು ರಾಜ್ಯ ಸರ್ಕಾರ ಸಂಭ್ರಮ ಆಚರಿಸುತ್ತಿದೆ. ಸರ್ಕಾರ ಪ್ರತಿ ವರ್ಷ ₹1 ಲಕ್ಷ ಕೋಟಿ ಸಾಲ ಮಾಡಿ ಜನರ ಮೇಲೆ ಸಾಲ ಹೊರೆಸುತ್ತಿದೆ. ಇದೇ ಸರ್ಕಾರದ ದೊಡ್ಡ ಸಾಧನೆ ಮತ್ತು ಕೊಡುಗೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
‘ಸಿ.ಎಂ., ಡಿಸಿಎಂ ನಿತ್ಯ ಕುರ್ಚಿ ಕಿತ್ತಾಟದಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಸಂಪದ್ಭರಿತ ರಾಜ್ಯದಲ್ಲಿ ಬಡತನ ಆವರಿಸುತ್ತಿದೆ’ ಎಂದು ಸೋಮವಾರ ಸುದ್ದಿಗಾರರಿಗೆ ಮಾತನಾಡಿದ ಅವರು ಟೀಕಿಸಿದರು.
‘ಜೆಡಿಎಸ್ ಬೆಳ್ಳಿಹಬ್ಬ ಆಚರಿಸುತ್ತಿದ್ದು, ಈ ನಿಮಿತ್ತ ಫೆ.27ರಂದು ವಿಜಯಪುರ, ಧಾರವಾಡ, ಬಾಗಲಕೋಟೆ ಸೇರಿ ಏಳು ಜಿಲ್ಲೆಗಳ ಜನತಾ ಸಮಾವೇಶ ವಿಜಯಪುರದಲ್ಲಿ ನಡೆಸಲಾಗುವುದು’ ಎಂದರು.
‘ದೇವೇಗೌಡರು ಕಟ್ಟಿ ಬೆಳೆಸಿದ ಪ್ರಾದೇಶಿಕ ಪಕ್ಷ ಜೆಡಿಎಸ್, ನಾಯಕರನ್ನು ರೂಪಿಸುವ ಕಾರ್ಖಾನೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್ ತನ್ನ ಜಾತ್ಯತೀತ ಧೋರಣೆಯಿಂದ ಹಿಂದೆ ಸರಿದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.