ADVERTISEMENT

ವಿಜಯಪುರ: ನೀರು ಹರಿಸಲು ಡಿಸಿಎಂ ಗೋವಿಂದ ಕಾರಜೋಳ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 16:20 IST
Last Updated 13 ಜುಲೈ 2020, 16:20 IST
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ   

ವಿಜಯಪುರ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಜುಲೈ 21ರಿಂದ ನೀರು ಹರಿಸಲು ಪ್ರಾರಂಭಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದ್ದಾರೆ.

2020–21ನೇ ಸಾಲಿನ ಕಾಲುವೆ ಜಾಲದ ಕ್ಲೋಜರ್‌ ಕಾಮಗಾರಿಯನ್ನು ಜುಲೈ 20ರೊಳಗಾಗಿ ಪೂರ್ಣಗೊಳಿಸಿ ನೀರು ಒದಗಿಸುವಂತೆ ಅವರು ತಿಳಿಸಿದ್ದಾರೆ.

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಸ್ಥಗಿತವಾಗುವವರೆಗೆ ಕಾಲುವೆಗೆ ನೀರು ಹರಿಸಲು ಹಾಗೂ ಒಳಹರಿವು ಸ್ಥಗಿತವಾದ ನಂತರ ಹಿಂಗಾರಿಗೆ ನಾರಾಯಣಪುರ ಜಲಾಶಯದ ಕಾಲುವೆಯಿಂದ 14 ದಿನ ಚಾಲು, 8 ದಿನ್‌ ಬಂದ್‌ ಹಾಗೂ ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ 8 ದಿನ ಚಾಲು, 7 ದಿನ ಬಂದ್ ಪದ್ಧತಿಯನ್ನು ಅನುಸರಿಸಿ ನೀರು ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.