ಮುದ್ದೇಬಿಹಾಳ: ತಾಲ್ಲೂಕಿನ ಅಂಗನವಾಡಿಗಳಿಗೆ ಆಹಾರ ಪೂರೈಸುವ ಎಂ.ಎಸ್.ಪಿ.ಸಿ ಘಟಕಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟಕದಲ್ಲಿ ತಯಾರಿಸುವ ಆಹಾರ ಸಾಮಗ್ರಿ ಗುಣಮಟ್ಟ ಪರಿಶೀಲಿಸಿ, ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಲು ಅಲ್ಲಿದ್ದ ಸಿಬ್ಬಂದಿಗೆ ತಿಳಿಸಿದರು.
ಅಂಗನವಾಡಿ ಮಕ್ಕಳಿಗೆ ಕೊಡುವ ಮಿಲ್ಲೆಟ್, ಲಾಡು, ಪೌಷ್ಠಿಕ ಆಹಾರವನ್ನು ಪರೀಕ್ಷಿಸಿದರು.
ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ನಡೆದಿರುವ ಎಂ.ಎಸ್.ಪಿ.ಸಿ ನೆಲಹಾಸು ಅಲ್ಲಲ್ಲಿ ಒಡೆದಿದೆ. ಅದನ್ನು ದುರಸ್ತಿ ಮಾಡಿಸಿಕೊಡಲು ಸಂಬಂಧಿಸಿದ ಕಟ್ಟಡದ ಮಾಲೀಕರಿಗೆ ತಿಳಿಸಬೇಕು. ದುರಸ್ತಿ ಕಾರ್ಯ ಆಗದಿದ್ದರೆ ಬೇರೆ, ಉತ್ತಮ ಕಟ್ಟಡವನ್ನು ಹುಡುಕುವಂತೆ ಸಿಡಿಪಿಒ ಶಿವಮೂರ್ತಿ ಕುಂಬಾರ ಅವರಿಗೆ ಸೂಚಿಸಿದರು.
ಎಂ.ಎಸ್.ಪಿ.ಸಿ ಅಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ, ವ್ಯವಸ್ಥಾಪಕ ದಾವಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.