ADVERTISEMENT

ವಿಜಯಪುರ: ಆಕ್ಸಿಜನ್ ಕಾನ್ಸಟ್ರೇಟರ್ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 10:55 IST
Last Updated 14 ಮೇ 2021, 10:55 IST
ವಿಜಯಪುರದ ಭಾರತೀಯ ಜೈನ ಸಂಘಟನೆಯಿಂದ ಕೋವಿಡ್ ಪೀಡಿತರ ಸೇವೆಗಾಗಿ ನೀಡಲಾಗಿರುವ 38 ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಲೋಕಾರ್ಪಣೆ ಮಾಡಿದರು
ವಿಜಯಪುರದ ಭಾರತೀಯ ಜೈನ ಸಂಘಟನೆಯಿಂದ ಕೋವಿಡ್ ಪೀಡಿತರ ಸೇವೆಗಾಗಿ ನೀಡಲಾಗಿರುವ 38 ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಲೋಕಾರ್ಪಣೆ ಮಾಡಿದರು   

ವಿಜಯಪುರ: ಭಾರತೀಯ ಜೈನ ಸಂಘಟನೆಯಿಂದಐದುಲೀಟರ್ ಸಾಮರ್ಥ್ಯವುಳ್ಳ 38 ಆಕ್ಸಿಜನ್ ಕಾನ್ಸಟ್ರೇಟರ್ ಅನ್ನು ಕೋವಿಡ್‌ ರೋಗಿಗಳ ಸೇವೆಗೆ ಸಮರ್ಪಿಸಲಾಯಿತು.

ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ತೊಂದರೆಗೀಡಾಗಿರುವಂತವರು ಮಿಷನ್‌ ರಾಹತ್‌ ಆಕ್ಸಿಜನ್‌ ಬ್ಯಾಂಕ್‌ ವಿಜಯಪುರ(Mission Rahat Oxygen Bank Vijayapur) ಇವರನ್ನು ಸಂಪರ್ಕಸಿ, ಅಗತ್ಯ ದಾಖಲೆಗಳನ್ನು ಒದಗಿಸಿ ಆಕ್ಸಿಜನ್ ಕಾನ್ಸಟ್ರೇಟರಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಜೈನ ಸಂಘಟನೆ ಮನವಿ ಮಾಡಿದೆ.

ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಲೋಕಾರ್ಪಣೆ ಮಾಡಿದರು. ಸಂಘದ ಅಧ್ಯಕ್ಷ ಮಹಾವೀರ ಪಾರೇಖ, ವಿಜಯ ರುಣವಾಲ, ಅಮಿತ್‌ ಕಠಾರಿಯಾ ಹಾಗೂ ಸಂಘದ ಕಾರ್ಯಕರ್ತರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.