ADVERTISEMENT

ಹಕ್ಕುಪತ್ರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 15:52 IST
Last Updated 8 ಜುಲೈ 2019, 15:52 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಈಚೆಗೆ ಮನವಿಪತ್ರ ಸಲ್ಲಿಸಲಾಯಿತು
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಈಚೆಗೆ ಮನವಿಪತ್ರ ಸಲ್ಲಿಸಲಾಯಿತು   

ವಿಜಯಪುರ: ಚಡಚಣ ಪಟ್ಟಣದ ವಾರ್ಡ್ ನಂ.7ರ ಸರ್ಕಾರಿ ಜಮೀನು, ಸರ್ವೆ ನಂ.59ರ ನಿವಾಸಿಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ನಿವಾಸಿ ಶಬ್ಬೀರ ನದಾಫ್ ಮಾತನಾಡಿ, ‘ಚಡಚಣ ಪಟ್ಟಣದ ವಾರ್ಡ್ ನಂ.7ರಲ್ಲಿ ಸರ್ಕಾರಿ ಜಮೀನಲ್ಲಿ ಸುಮಾರು 50 ವರ್ಷಗಳಿಂದ ವಾಸಿಸುತ್ತಿದ್ದು, ರಹವಾಸಿ ಕೂಡ ಇದೆ. ಈ ಜಮೀನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಜನಾಂಗದವರು ವಾಸಿಸುತ್ತಿದ್ದಾರೆ. ಆದಾಗ್ಯೂ, ಹಕ್ಕಪತ್ರ ಇಲ್ಲ. ಆದ್ದರಿಂದ ಕೂಡಲೇ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

ಸೋಮಶೇಖರ ಬಡಿಗೇರ, ಮೈಬೂಬ್ ಬನಸೂಡೆ, ಚಂದ್ರಶೇಖರ ಸಿಂಧೆ, ಇನೂಸ್ ನದಾಫ್, ಇಲಾಯಿ ನದಾಫ್, ರಾಜಶೇಖರ ಕುಂಬಾರ, ಮೆಹಬೂಬ್‌ ನದಾಫ್, ಲಾಲಸಾಹೇಬ್ ನದಾಫ್, ಮಹೇಶ ಕುಂಬಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.