ADVERTISEMENT

ಹಳಿ ಮೇಲೆ ಬಿದ್ದ ವಿದ್ಯುತ್‌ ಕಂಬ; ರೈಲು ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 15:23 IST
Last Updated 11 ಡಿಸೆಂಬರ್ 2020, 15:23 IST
ವಿಜಯಪುರ ನಗರದ ರೈಲು ನಿಲ್ದಾಣದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು, ಹಳಿಗಳ ಮೇಲೆ ಬಿದ್ದಿರುವ ವಿದ್ಯುತ್‌ ಕಂಬವನ್ನು ತೆರವುಗೊಳಿಸಿದ ಕಾರ್ಮಿಕರು
ವಿಜಯಪುರ ನಗರದ ರೈಲು ನಿಲ್ದಾಣದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು, ಹಳಿಗಳ ಮೇಲೆ ಬಿದ್ದಿರುವ ವಿದ್ಯುತ್‌ ಕಂಬವನ್ನು ತೆರವುಗೊಳಿಸಿದ ಕಾರ್ಮಿಕರು   

ವಿಜಯಪುರ: ನಗರದ ರೈಲು ನಿಲ್ದಾಣದಲ್ಲಿಲಾರಿಯೊಂದು ಡಿಕ್ಕಿ ಹೊಡೆದು, ಹಳಿಗಳ ಮೇಲೆ ವಿದ್ಯುತ್‌ ಕಂಬ ಬಿದ್ದ ಪರಿಣಾಮ ಮೂರು ರೈಲುಗಳ ಸಂಚಾರಕ್ಕೆ ಅಡಚಣೆಯಾಯಿತು.

ಶುಕ್ರವಾರ ಮಧ್ಯಾಹ್ನ 3.45ಕ್ಕೆ ಈ ಅವಘಡ ಸಂಭವಿಸಿದ್ದು, ಸಂಜೆ 6.50ಕ್ಕೆ ಕಂಬವನ್ನು ತೆರವುಗೊಳಿಸಲಾಯಿತು. ಕಂಬದಲ್ಲಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಯಾವುದೇ ಅನಾಹುತ ನಡೆದಿಲ್ಲ.

ಈ ಅವಘಡದಿಂದಾಗಿ ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್, ಸೊಲ್ಲಾಪುರ-ಮೈಸೂರು ಗೋಲ್‌ಗುಂಬಜ್‌ ಏಕ್ಸ್‌ಪ್ರೆಸ್, ಗದಗ-ಮುಂಬೈ ಏಕ್ಸ್‌ಪ್ರೆಸ್‌ ರೈಲುಗಳು ನಿಗದಿತ ಸಮಯಕ್ಕೆ ಸಂಚರಿಸಲು ಸಾಧ್ಯವಾಗದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಿದರು.

ADVERTISEMENT

ಸಂಜೆ 6.50ಕ್ಕೆ ಕಂಬವನ್ನು ತೆರವುಗೊಳಿಸಿದ ಬಳಿಕ ರೈಲುಗಳ ಸಂಚಾರ ಆರಂಭವಾಯಿತು ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.