ADVERTISEMENT

ಆಲಮೇಲ | ಪ್ರದೀಪ ಕೊಲೆ; 9 ಆರೋಪಿಗಳ ಬಂಧನ

ಕೌಟುಂಬಿಕ ರಾಜಕೀಯ ದ್ವೇಷವೇ ಕೊಲೆಗೆ ಕಾರಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 15:08 IST
Last Updated 4 ಡಿಸೆಂಬರ್ 2021, 15:08 IST
ಆಲಮೇಲದಲ್ಲಿ ಗುರುವಾರ ತಡರಾತ್ರಿ ನಡೆದ ರೌಡಿಶೀಟರ್  ಪ್ರದೀಪ ಯಂಟಮಾನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 9 ಜನ ಆರೋಪಿಗಳೊಂದಿಗೆ ಡಿವೈಎಸ್ಪಿ ಶ್ರೀಧರ ದೊಡ್ಡಿ  ಸಿ.ಪಿ.ಐ ಎಸ್.ಎಂ.ಪಾಟೀಲ, ಆಲಮೇಲ ಎಸ್ ಐ ಸುರೇಶ ಗಡ್ಡಿ, ದೇವರಹಿಪ್ಪರಗಿ ಎಸ್ ಐ ರವಿ ಯಡಣ್ಣವರ ಇದ್ದಾರೆ
ಆಲಮೇಲದಲ್ಲಿ ಗುರುವಾರ ತಡರಾತ್ರಿ ನಡೆದ ರೌಡಿಶೀಟರ್  ಪ್ರದೀಪ ಯಂಟಮಾನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 9 ಜನ ಆರೋಪಿಗಳೊಂದಿಗೆ ಡಿವೈಎಸ್ಪಿ ಶ್ರೀಧರ ದೊಡ್ಡಿ  ಸಿ.ಪಿ.ಐ ಎಸ್.ಎಂ.ಪಾಟೀಲ, ಆಲಮೇಲ ಎಸ್ ಐ ಸುರೇಶ ಗಡ್ಡಿ, ದೇವರಹಿಪ್ಪರಗಿ ಎಸ್ ಐ ರವಿ ಯಡಣ್ಣವರ ಇದ್ದಾರೆ   

ಆಲಮೇಲ(ವಿಜಯಪುರ): ಪಟ್ಟಣದಲ್ಲಿ ಗುರುವಾರ ತಡರಾತ್ರಿ ನಡೆದ ರೌಡಿಶೀಟರ್ ಪ್ರದೀಪ ಯಂಟಮಾನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಆಲಮೇಲ ಪೊಲೀಸರು ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಆಲಮೇಲದ ಭೀಮು ಮೇಲಿನಮನಿ, ಸಂಜು ಮೇಲಿನಮನಿ, ಗೌತಮ ಮೇಲಿನಮನಿ, ಮುತ್ತು ಮೇಲಿನಮನಿ, ಪಿಂಟು ಉರ್ಫ ಸಂಗಪ್ಪ ಮೇಲಿನಮನಿ, ಶಿವಪುತ್ರ ಮೇಲಿನಮನಿ, ವಿರೇಶ ಮೇಲಿನಮನಿ, ಸತೀಶ ಮೇಲಿನಮನಿ, ದೇವು ಮೇಲಿನಮನಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇನ್ನುಳಿದ ನಾಲ್ಕು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದರು.

ADVERTISEMENT

ಎರಡು ಕುಟುಂಬಗಳ ನಡುವೆ ಇದ್ದ ಹಳೆಯ ದ್ವೇಷವೇ ಕೊಲೆಗೆ ಕಾರಣ. ಮಾಜಿ ಸದಸ್ಯನಾಗಿದ್ದ ಪ್ರದೀಪ ಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 17ನೇ ವಾರ್ಡ್‌ನಿಂದ ಸ್ಪರ್ಧಿಸಲು ತಯಾರಿಗಿದ್ದ, ಈ ವಿಷಯವನ್ನೆ ಮುಖ್ಯವಾಗಿಟ್ಟುಕೊಂಡು ಆರೋಪಿಗಳು ಕೊಲೆ ಮಾಡಿದ್ದಾರೆ ಎಂದರು.

ಆರೋಪಿಗಳ ಪತ್ತೆಗೆ ಸಿ.ಪಿ.ಐ ಎಸ್.ಎಂ.ಪಾಟೀಲ ಮಾರ್ಗದರ್ಶನದಲ್ಲಿ ಸುರೇಶ ಗಡ್ಡಿ, ರವಿಯಡಣ್ಣವರ ನೇತೃವದಲ್ಲಿ ಎರಡು ತಂಡಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್‌ ರಚಿಸಿದ್ದರು.

ಸಿ.ಪಿ.ಐ ಎಸ್.ಎಂ.ಪಾಟೀಲ, ಆಲಮೇಲ ಎಸ್ ಐ ಸುರೇಶ ಗಡ್ಡಿ, ದೇವರಹಿಪ್ಪರಗಿ ಎಸ್ ಐ ರವಿ ಯಡಣ್ಣವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.