ADVERTISEMENT

‘ಮಕ್ಕಳ ಪ್ರತಿಭೆ ಗುರುತಿಸಿ’

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 15:03 IST
Last Updated 7 ಆಗಸ್ಟ್ 2019, 15:03 IST
ಮನಗೂಳಿಯ ಎಂಪಿಎಸ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಪರ್ವತಗೌಡ ಸೋ.ಪಾಟೀಲ ಉದ್ಘಾಟಿಸಿದರು
ಮನಗೂಳಿಯ ಎಂಪಿಎಸ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಪರ್ವತಗೌಡ ಸೋ.ಪಾಟೀಲ ಉದ್ಘಾಟಿಸಿದರು   

ಮನಗೂಳಿ: ‘ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡುವ ಜತೆಗೆ ಭಾರತೀಯ ಪರಂಪರೆ, ಸಂಸ್ಕೃತಿ, ಜಾನಪದವನ್ನು ಅನಾವರಣಗೊಳಿಸುವ ಕಾರ್ಯಕ್ರಮ ಇದಾಗಿದೆ’ ಎಂದು ಎ.ಎ.ಉಪಾಧ್ಯಾಯ ಹೇಳಿದರು.

ಪಟ್ಟಣದ ಎಂಪಿಎಸ್‌ ಶಾಲೆಯಲ್ಲಿ ಮನಗೂಳಿ ಸಮೂಹ ಸಂಪನ್ಮೂಲ ಕೇಂದ್ರದ ನಂ.2ರಿಂದ ಬುಧವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕ ಸಿ.ಜಿ.ಹಿರೇಮಠ ಮಾತನಾಡಿ, ‘ಪ್ರತಿಭಾ ಕಾರಂಜಿಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶನ ಮಾಡುವುದು ಮಹತ್ವದ್ದು’ ಎಂದು ತಿಳಿಸಿದರು.

ADVERTISEMENT

ಸಿ.ಟಿ. ಮಾದರ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಜಿಲ್ಲೆ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.

ಮನಗೂಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ, ಪರ್ವತಗೌಡ ಸೋ. ಪಾಟೀಲ, ರಾಮಗೊಂಡ ಕ್ಯಾತಣ್ಣವರ, ವೈ.ಎಸ್. ಹಾವಣ್ಣ, ಎಸ್.ಎನ್. ಜಾಧವ, ವೈ.ಎನ್. ಬೇವೂರ ಇದ್ದರು. ಸಂಗಮೇಶ ಗೆಣ್ಣೂರ ಸ್ವಾಗತಿಸಿದರು. ಆರ್.ಎಸ್. ಮುಡಿಶೆಣ್ಣವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.