ADVERTISEMENT

ದೋಷರಹಿತ ಮತದಾರರ ಪಟ್ಟಿ ಸಿದ್ಧವಾಗಲಿ: ಯು.ಬಿ.ಧರಿಕಾರ

ಪಟ್ಟಿ ಪರಿಷ್ಕರಣೆ ತರಬೇತಿ ಸಭೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:28 IST
Last Updated 24 ನವೆಂಬರ್ 2020, 16:28 IST
ನಾಲತವಾಡದ ಹೋಬಳಿ ಮಟ್ಟದ ಬಿಎಲ್ಒಗಳ ಹಾಗೂ ಮೇಲ್ವಿಚಾರಕರ ತರಬೇತಿಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಮಾತನಾಡಿದರು
ನಾಲತವಾಡದ ಹೋಬಳಿ ಮಟ್ಟದ ಬಿಎಲ್ಒಗಳ ಹಾಗೂ ಮೇಲ್ವಿಚಾರಕರ ತರಬೇತಿಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಮಾತನಾಡಿದರು   

ನಾಲತವಾಡ: ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಮಹತ್ವವಾಗಿದ್ದು, ದೋಷ ರಹಿತವಾದ ಮಾದರಿ ಮತದಾರ ಪಟ್ಟಿ ಸಿದ್ಧಪಡಿಸುವಂತೆ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಮತದಾರ ಪಟ್ಟಿ ವೀಕ್ಷಕ ಯು.ಬಿ.ಧರಿಕಾರ ಸೂಚಿಸಿದರು.

ನಾಲತವಾಡದ ವೀರೇಶ್ವರ ಡಿಇಡಿ ಕಾಲೇಜಿನಲ್ಲಿ ಜರುಗಿದ ಹೋಬಳಿ ಮಟ್ಟದ ಬಿಎಲ್ಒ ಹಾಗೂ ಮೇಲ್ವಿಚಾರಕರಿಗೆ 2021ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ತರಬೇತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾರರ ಪಟ್ಟಿ ಶುದ್ಧವಾಗಿದ್ದರೆ ಚುನಾವಣೆಯೂ ಸಹ ಸುಸೂತ್ರವಾಗಿ ಜರುಗುವುದು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತಮಗೆ ವಹಿಸಿದ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಫೋಟೊ ಇಲ್ಲದಿದ್ದರೆ ಫೋಟೊ ಅಪ್ಲೋಡ್ ಮಾಡಬೇಕು. ಕೆಲವೊಬ್ಬರಿಗೆ ಮತದಾರರ ಗುರುತಿನ ಚೀಟಿ ಇದ್ದರೂ ಸಹ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ. ಇಂತಹ ಒಂದಿಲ್ಲ ಒಂದು ಸಮಸ್ಯೆಗಳು ಇದ್ದು ಅಂಥವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸರಿಪಡಿಸುವ ಕಾರ್ಯವಾಗಬೇಕುಎಂದರು.
ಅನರ್ಹರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಿರಿ ಎಂದು ಉಪತಹಶೀಲ್ದಾರ್ ಜಿ.ಎನ್.ಕಟ್ಟಿಯವರಿಗೆ ಸೂಚಿಸಿದರು.

ADVERTISEMENT

ದೂರುಗಳ ಮಹಾಪೂರ: ಸಭೆಯಲ್ಲಿ ಭಾಗವಹಿಸಿದ ಬಿಎಲ್ಒಗಳು ‘ನಾವು ಸೂಕ್ತ ದಾಖಲೆಗಳ ಸಮೇತ ಅರ್ಜಿ ಸ್ವೀಕರಿಸಿ ಕಚೇರಿಗೆ ಸಲ್ಲಿಸಿದರು, ಕಂಪ್ಯೂಟರ್ ಆಪರೇಟರ್ ಗಳು ಸರಿಯಾಗಿ ಕೆಲಸ ಮಾಡದ ಕಾರಣ ಮತದಾರರ ಪಟ್ಟಿಯಲ್ಲಿ ದೋಷಗಳು ಹೆಚ್ಚುತ್ತಿದೆ' ಎಂದರು.

'ಮತದಾರರಿಗೆ ಸರಿಯಾಗಿ ಗುರುತಿನ ಚೀಟಿಗಳನ್ನು ಕೊಡುತ್ತಿಲ್ಲ, ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗುತ್ತಿದೆ, ಸರಿಯಾಗಿ ಸಂಭಾವನೆ ನೀಡುತ್ತಿಲ್ಲ, ವಿತರಿಸಿದ ಗುರುತಿನ ಚೀಟಿಗೆ ಹಣವನ್ನು ಕೇಳುವುದಿಲ್ಲ, ನಮಗೆ ಬಿಲ್ ಜಮಾವಣಿಯಾಗಿಲ್ಲ’ ಎಂದು ಬಿಎಲ್ಒಗಳು ತಮ್ಮ ಅಳಲನ್ನು ತೋಡಿಕೊಂಡರು. ಮಲ್ಲಿಕಾರ್ಜುನ ಅಮರಾವದಗಿ ತರಬೇತಿ ನೀಡಿದರು. ಕಂದಾಯ ನಿರೀಕ್ಷಕ ಎನ್.ಬಿ.ದೊರೆ, ಗ್ರಾಮ ಲೆಕ್ಕಾಧಿಕಾರಿ ಏಕನಾಥ ಸಾಲೋಟಗಿ, ಬಿಆರ್‌ಪಿ ಸಂಗಮೇಶ ನವಲಿ, ಎಂ.ಬಿ.ಚಲುವಾದಿ, ವೀರೇಶ ನವಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.