ADVERTISEMENT

ವಿಜಯಪುರ: ಆನ್‌ಲೈನ್‌ ಘಟಿಕೋತ್ಸವಕ್ಕೆ ‘ಅಕ್ಕ’ ವಿವಿ ಸಿದ್ಧತೆ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 12:30 IST
Last Updated 13 ಆಗಸ್ಟ್ 2020, 12:30 IST
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ   

ವಿಜಯಪುರ: ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 11ನೇ ಘಟಕೋತ್ಸವವನ್ನು ಆನ್‌ಲೈನ್‌ ಮೂಲಕ ನಡೆಸಲು ಸಿದ್ಧತೆ ನಡೆದಿದೆ.

ವಿಶ್ವವಿದ್ಯಾಲಯದ ಅಕ್ಕ ಟಿವಿ ಯೂಟ್ಯೂಬ್‌ ಚಾನಲೆ, ವಿಶ್ವವಿದ್ಯಾಲಯದ ಫೇಸ್‌ಬುಕ್‌ ಪೇಜ್‌ ಮತ್ತು ಗೂಗಲ್‌ ಮೀಟ್, ಝೂಮ್ ‌‌‌ ಬಳಸಿಕೊಂಡು ಆನ್‌ಲೈನ್‌ ಘಟಿಕೋತ್ಸವ ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಓಂಕಾರ ಕಾಕಡೆ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಆನ್‌ಲೈನ್‌ ಘಟಿಕೋತ್ಸವ ಆಯೋಜನೆ, ಮುಖ್ಯ ಅತಿಥಿಗಳ ಪಟ್ಟಿ ಮತ್ತು ಗೌರವ ಡಾಕ್ಟರೇಟ್‌ ಆಯ್ಕೆಗೆ ಸಮಿತಿ ರಚನೆ ಸಂಬಂಧ ಈಗಾಗಲೇ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ADVERTISEMENT

ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನದಲ್ಲಿ ಸುಮಾರು 200 ಜನರಿಗೆ ಕೂರಲು ಆಸನದ ವ್ಯವಸ್ಥೆ ಮಾಡಲಾಗುವುದು. ಚಿನ್ನದ ಪದಕ ವಿಜೇತ77 ವಿದ್ಯಾರ್ಥಿಗಳು, 68 ಜನ ಪಿಎಚ್.‌ಡಿ ಪದವೀಧರರು ಹಾಗೂ ಸಿಂಡಿಕೇಟ್‌, ಅಕಾಡೆಮಿಕ್‌ ಕೌನ್ಸಿಲ್‌ ಮತ್ತು ಡೀನ್‌ಗಳಿಗೆ ಮಾತ್ರ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.

ಉನ್ನತ ಶಿಕ್ಷಣ ಸಚಿವರನ್ನು ಘಟಿಕೋತ್ಸವಕ್ಕೆ ಆಹ್ವಾನಿಸಲಾಗುವುದು. ರಾಜ್ಯಪಾಲರು ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕೆ, ವಿದೇಶಕ್ಕೆ ತೆರಳಲು, ವಿವಿಧ ಉದ್ಯೋಗಕ್ಕೆ ಸೇರಲು ಪದವಿ, ಸ್ನಾತಕೋತರ ಪದವಿ ಸರ್ಟಿಫಿಕೇಟ್‌ಗಳ ಅವಶ್ಯಕತೆ ಇರುವುದರಿಂದ ಆದಷ್ಟು ಬೇಗ ಘಟಿಕೋತ್ಸವ ನಡೆಸಬೇಕಾದ ತುರ್ತು ಇದೆ ಎಂದು ತಿಳಿಸಿದರು.

ಕುಲಪತಿ ನೇಮಕಕ್ಕೆ ಸಮಿತಿ ರಚನೆ

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತೆರವಾಗಿರುವ ಕುಲಪತಿ ಹುದ್ದೆಗೆ ಆಯ್ಕೆ ಸಂಬಂಧ ರಾಜ್ಯ ಸರ್ಕಾರವು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ಧೇಗೌಡ ನೇತೃತ್ವದಲ್ಲಿ ಶೋಧನಾ ಸಮಿತಿ ನೇಮಕ ಮಾಡಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಜಿ.ಮೂಲಿಮನಿ, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಮೀನಾ ಚಂದಾವರಕರ ಮತ್ತು ಹರಿಯಾಣ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಷ್ಮಾ ಯಾದವ್‌ ಅವರನ್ನು ಶೋಧನಾ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

* ಕೋವಿಡ್‌ ನಿರ್ಬಂಧಗಳಿರುವುದರಿಂದ ಪದವೀಧರರು ಮತ್ತು ಪಾಲಕರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

– ಡಾ.ಓಂಕಾರ ಕಾಕಡೆ, ಪ್ರಭಾರ ಕುಲಪತಿ, ಅಕ್ಕಮಹಾದೇವಿ ಮಹಿಳಾ ವಿವಿ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.