ADVERTISEMENT

ವಿಜಯಪುರ ಜಿಲ್ಲೆಯ ವಿವಿಧೆಡೆ ಗುಡುಗು, ಮಳೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 15:44 IST
Last Updated 9 ಏಪ್ರಿಲ್ 2021, 15:44 IST
   

ವಿಜಯಪುರ: ಜಿಲ್ಲೆಯಲ್ಲಿ ಚದುರಿದಂತೆ ಅಲ್ಲಲ್ಲಿ ಶುಕ್ರವಾರ ಸಂಜೆ ಬಿರುಸಿನ ಗಾಳಿ, ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಸಾಧಾರಣ ಮಳೆಯಾಗಿದೆ.

ವಿಜಯಪುರ ನಗರ, ಕೊಲ್ಹಾರ, ಕನಮಡಿ, ಬಳಬಟ್ಟಿ, ಯರಝರಿ, ಆಲಮೇಲ, ದೇವರ ಹಿಪ್ಪರಗಿ, ತಾಳಿಕೋಟೆ, ತಾಂಬಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ಬಿಸಿಲಿನಿಂದ ಕಾದು ಕಬ್ಬಿಣದಂತಾಗಿದ್ದ ವಾತಾವರಣ ತಂಪಾಗಿದೆ. ಮಳೆಯ ಪರಿಣಾಮ ಒಣದ್ರಾಕ್ಷಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ತಿಕೋಟಾ ಭಾಗದಲ್ಲಿ ಬಿಸಿಲಿಗೆ ಒಣಗಿಸಲು ಹಾಕಿದ್ದ ದ್ರಾಕ್ಷಿಗೆ ಮಳೆಯಿಂದ ಸಮಸ್ಯೆಯಾಗಿದೆ.

ಜಿಲ್ಲೆಯಲ್ಲಿ ಮುಂದಿನ ಎರಡು–ಮೂರು ದಿನ ಗುಡುಗು, ಸಿಡಿಲಿನೊಂದಿಗೆ‌ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ADVERTISEMENT

ಎರಡು, ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮೋಡಗಳು ದಟ್ಟೈಸಿದ್ದವು. ಪರಿಣಾಮ ಬಿಸಿಲು ಕಡಿಮೆಯಾಗಿ, ವಾತಾವರಣ ಸ್ವಲ್ಪ ತಂಪಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.