ADVERTISEMENT

ಸೇನಾ ಭರ್ತಿ ರ‍್ಯಾಲಿ ನಡೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:13 IST
Last Updated 12 ಮೇ 2022, 15:13 IST
ಭಾರತೀಯ ಸೇನೆಗೆ ಹೊಸ ನೇಮಕಾತಿ ರ‍್ಯಾಲಿ ನಡೆಸುವಂತೆ ಆಗ್ರಹಿಸಿ ಆಕಾಂಕ್ಷಿಗಳು ವಿಜಯಪುರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಭಾರತೀಯ ಸೇನೆಗೆ ಹೊಸ ನೇಮಕಾತಿ ರ‍್ಯಾಲಿ ನಡೆಸುವಂತೆ ಆಗ್ರಹಿಸಿ ಆಕಾಂಕ್ಷಿಗಳು ವಿಜಯಪುರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ವಿಜಯಪುರ: ಭಾರತೀಯ ಸೇನೆಗೆ ಹೊಸ ನೇಮಕಾತಿ ರ‍್ಯಾಲಿ ನಡೆಸುವಂತೆ ಆಗ್ರಹಿಸಿ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಅಭ್ಯರ್ಥಿಗಳು, ಬಳಿಕ ಜಿಲ್ಲಾಧಿಕಾರಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೋವಿಡ್‌ ಕಾರಣದಿಂದ ಮೂರು ವರ್ಷಗಳಿಂದ ಸೇನಾ ಭರ್ತಿರ‍್ಯಾಲಿ ನಡೆಯದ ಕಾರಣಕ್ಕೆಸಾಕಷ್ಟು ಜನ ಆಕಾಂಕ್ಷಿಗಳು ವಯಸ್ಸು ಮೀರುತ್ತಿರುವುದರಿಂದ ಅವಕಾಶ ವಂಚಿತರಾಗಿದ್ದಾರೆ ಎಂದು ದೂರಿದರು.

ADVERTISEMENT

ತಕ್ಷಣ ಸೇನಾ ಭರ್ತಿ ರ್‍ಯಾಲಿ ನಡೆಸಬೇಕು. ಅಲ್ಲದೇ, ವಯಸ್ಸಿನ ಮಿತಿಯನ್ನು ಸಡಲಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪರೀಕ್ಷೆ ಬರೆಯಬೇಕಾದ ಅನೇಕ ಅಭ್ಯರ್ಥಿಗಳು ಕೂಡ ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ತಕ್ಷಣ ಪರೀಕ್ಷೆ ನಡೆಸಿ, ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.

ಆಕಾಂಕ್ಷಿಗಳಾದ ನಾನಾಗೌಡ ದೇವರಮನಿ, ಶಂಕರ ಲಡಗಿ, ಅಮಿತ್‌ ರಾಠೋಡ, ಆಕಾಶ ಹಿಪ್ಪರಗಿ, ಹನುಮಂತ ಪಾಟೀಲ, ಮಾಳಪ್ಪ ಇಟಗಿ, ಶ್ರೀಕಾಂತ ಗೋಡೆಕಾರ, ಪ್ರಶಾಂತ ಯಳವಾರ, ಮಂಜುನಾಥ ಸಂಗೋಗಿ, ಸುಧಾಕರ ರಾಸ್ಕರ್‌, ದೇವರಾಜ ಪೂಜಾರಿ, ಅಮೋಘ ಸಿದ್ದ ಪೂಜಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.