ದೇವರಹಿಪ್ಪರಗಿ: ಹೊಸನಗರದ ಹಳ್ಳದ ಬಾವಿಯ ಹೂಳು ತೆಗೆಯಲು ಆಗ್ರಹಿಸಿ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಹಾಗೂ ಉಪಾಧ್ಯಕ್ಷ ರಮೇಶ ಮಸಬಿನಾಳ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿದ ಹೊಸನಗರದ ಸಾರ್ವಜನಿಕರು ತಮಗೆ ಆಧಾರದವಾದ ಹಳ್ಳದ ದಂಡೆಯ ಮೇಲಿನ ಭಾವಿಯ ಹೂಳು ತೆಗೆಯಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ವೀರಭದ್ರಯ್ಯ ಇಂಡಿ ಮಾತನಾಡಿ, ‘ಹಳ್ಳದಗುಂಡು ಎಂದೇ ಪರಿಚಿತವಾದ ಬಾವಿಯಲ್ಲಿ ಈಗ ಹೂಳು ತುಂಬಿ ನೀರು ಸಂಗ್ರಹಕ್ಕೆ ಅವಕಾಶವಿಲ್ಲದಂತಾಗಿದೆ. ಹಿಂದೆ ಹೂಳು ತೆಗೆಯಲು ಮನವಿ ಮಾಡಿದಾಗ ಕೇವಲ ಒಂದು ಅಡಿಯಷ್ಟು ಹೂಳು ತೆಗೆದು ಬಿಟ್ಟಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೊಸನಗರದ ಪ್ರಳಯರುದ್ರ ಈಶ್ವರ ದೇವಸ್ಥಾನ ಹತ್ತಿರದಲ್ಲಿರುವ ಈ ಬಾವಿಯ ನೀರು ಹತ್ತು ಹಲವು ಧಾರ್ಮಿಕ ಕಾರ್ಯಗಳಿಗೆ ಸಹಕಾರಿಯಾಗಿದ್ದು, ಈಗ ನೀರಿಲ್ಲದೇ ಇದ್ದು ದೇವತಾ ಕಾರ್ಯಗಳಿಗೆ ಬೇರೆಡೆ ಅಲೆಯುವಂತಾಗಿದೆ. ಕೂಡಲೇ ಬಾವಿಯ ಹೂಳು ತೆಗೆದು ಸಾರ್ವಜನಿಕರ ನಿತ್ಯದ ಧಾರ್ಮಿಕ ಕಾರ್ಯಗಳು ಹಾಗೂ ದೈನಂದಿನ ಬದುಕಿಗೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿ 3 ದಿನಗಳಲ್ಲಿ ಹೂಳು ತೆಗೆದು ಬಾವಿ ಸ್ವಚ್ಛಗೊಳಿಸುವ ಭರವಸೆ ನೀಡಿದರು.
ಭೋಜಪ್ಪ ಒಂಟೆತ್ತಿನ, ವಿಶ್ವನಾಥ ಹೀರಾಪೂರ, ಮಂಜುನಾಥ ಒಂಟೆತ್ತಿನ, ಶ್ರೀಶೈಲ ಪಾಟೀಲ, ಮಲ್ಲು ಒಂಟೆತ್ತಿನ, ಈರಣ್ಣ ಮಾಳನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.