ADVERTISEMENT

ಬಸವನಬಾಗೇವಾಡಿ | ದಾಸೋಹಕ್ಕೆ ರೊಟ್ಟಿ ಬುತ್ತಿ ನೀಡಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 16:04 IST
Last Updated 3 ಸೆಪ್ಟೆಂಬರ್ 2023, 16:04 IST
ಬಸವನಬಾಗೇವಾಡಿಯ ಆರಾಧ್ಯದೈವ ಮೂಲನಂದೀಶ್ವರ ಜಾತ್ರಾಮಹೋತ್ಸವದ ದಾಸೋಹಕ್ಕೆ ರೊಟ್ಟಿ ಬುತ್ತಿಯನ್ನು ಸಿದ್ದಲಿಂಗ ಸ್ವಾಮೀಜಿಯವರಿಗೆ ಮಹಿಳೆಯರು ಕೊಡುವ ಮೂಲಕ ದಾಸೋಹಕ್ಕೆ ಸೇವೆ ಸಲ್ಲಿಸಿದರು
ಬಸವನಬಾಗೇವಾಡಿಯ ಆರಾಧ್ಯದೈವ ಮೂಲನಂದೀಶ್ವರ ಜಾತ್ರಾಮಹೋತ್ಸವದ ದಾಸೋಹಕ್ಕೆ ರೊಟ್ಟಿ ಬುತ್ತಿಯನ್ನು ಸಿದ್ದಲಿಂಗ ಸ್ವಾಮೀಜಿಯವರಿಗೆ ಮಹಿಳೆಯರು ಕೊಡುವ ಮೂಲಕ ದಾಸೋಹಕ್ಕೆ ಸೇವೆ ಸಲ್ಲಿಸಿದರು    

ಬಸವನಬಾಗೇವಾಡಿ: ಸೆ.4 ರಿಂದ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವದ ದಾಸೋಹಕ್ಕೆ ರೊಟ್ಟಿ ಬುತ್ತಿಯನ್ನು ಮಹಿಳೆಯರು ಶನಿವಾರ ಸಂಜೆ ಬಸವೇಶ್ವರ ದೇವಸ್ಥಾನಕ್ಕೆ ನೀಡಿದರು.

ಪಟ್ಟಣದ ವಿರಕ್ತಮಠದಲ್ಲಿ ಮಹಿಳೆಯರು ತಂದಿದ್ದ ರೊಟ್ಟಿ ಬುತ್ತಿಗೆ ಸಿದ್ದಲಿಂಗ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬುತ್ತಿಗೆ ಪೂಜೆ ನೆರವೇರಿಸಿದ ನಂತರ ಮಹಿಳೆಯರು ರೊಟ್ಟಿ ಬುತ್ತಿಯನ್ನು ತಲೆ ಮೇಲೆ ಹೊತ್ತ ನಂತರ ಮೆರವಣಿಗೆ ನಡೆಯಿತು. ಬಸವ ಜನ್ಮಸ್ಮಾರಕದ ಮುಂಭಾಗ ಹಾಯ್ದು ಹಾರಿವಾಳ ಗಲ್ಲಿ, ಅಗಸಿ ಮೂಲಕ ದೇವಸ್ಥಾನಕ್ಕೆ ಮೆರವಣಿಗೆ ವಾದ್ಯಮೇಳದೊಂದಿಗೆ ತಲುಪಿತು. ಮೆರವಣಿಗೆಯುದ್ದಕ್ಕೂ ಬಸವ ನಾಮ ಕೇಳುವ ಜೊತೆಗೆ ಬಸವ ಧ್ವಜ ರಾರಾಜಿಸಿದವು.

ಮೆರವಣಿಗೆಯಲ್ಲಿ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಜಿ.ಆದಿಗೊಂಡ, ಮುಖಂಡರಾದ ಬಸವರಾಜ ಹಾರಿವಾಳ,  ಶಂಕರಗೌಡ ಬಿರಾದಾರ, ಮುರಿಗೆಪ್ಪ ಚಿಂಚೋಳ್ಳಿ, ಮೀರಾಸಾಬ ಕೊರಬು, ಮುತ್ತು ಪತ್ತಾರ, ಜಟ್ಟಿಂಗರಾಯ ಮಾಲಗಾರ, ರವಿ ರಾಠೋಡ, ಶ್ರೀಕಾಂತ ಕೊಟ್ರಶೆಟ್ಟಿ, ಬಸವರಾಜ ಅಳ್ಳಗಿ, ಶ್ರೀಧರ ಕುಂಬಾರ, ವಿಶ್ವನಾಥ ಹಿರೇಮಠ, ಸಂಜು ಬಿರಾದಾರ, ಮುತ್ತು ಡಂಬಳ,ಶ್ರೀಕಾಂತ ಪಡಶೆಟ್ಟಿ, ಮನ್ನಾನ ಶಾಬಾದಿ, ಶಿವಾನಂದ ತೋಳನೂರ, ಕೊಟ್ರೇಶಿ ಹೆಗಡ್ಯಾಳ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.