ADVERTISEMENT

ವಿಜಯಪುರ: ಪಿಸ್ತೂಲ್‌ ಖರೀದಿಸಿದ ರೌಡಿಗೆ ಎಸ್‌ಪಿ ಕಪಾಳಮೋಕ್ಷ

ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಗಡಿಪಾರು ಮಾಡುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 14:28 IST
Last Updated 20 ನವೆಂಬರ್ 2020, 14:28 IST
ವಿಜಯಪುರ ನಗರದ ಪೊಲೀಸ್‌ ಮೈದಾನದಲ್ಲಿ ಶುಕ್ರವಾರ ನಡೆದ ರೌಡಿ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್, ಅಕ್ರಮವಾಗಿ ಪಿಸ್ತೂಲ್‌ ಖರೀದಿಸಿ‌ ರೌಡಿಯೊಬ್ಬನ ಜುಟ್ಟ ಹಿಡಿದು, ಕಪಾಳಮೋಕ್ಷ ಮಾಡಿದರು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಪೊಲೀಸ್‌ ಮೈದಾನದಲ್ಲಿ ಶುಕ್ರವಾರ ನಡೆದ ರೌಡಿ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್, ಅಕ್ರಮವಾಗಿ ಪಿಸ್ತೂಲ್‌ ಖರೀದಿಸಿ‌ ರೌಡಿಯೊಬ್ಬನ ಜುಟ್ಟ ಹಿಡಿದು, ಕಪಾಳಮೋಕ್ಷ ಮಾಡಿದರು –ಪ್ರಜಾವಾಣಿ ಚಿತ್ರ   

ವಿಜಯಪುರ:ನಗರದ ಪೊಲೀಸ್‌ ಮೈದಾನದಲ್ಲಿ ಶುಕ್ರವಾರ ನಡೆದ ರೌಡಿ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್, ಅಕ್ರಮವಾಗಿ ಪಿಸ್ತೂಲ್‌ ಖರೀದಿಸಿ‌ ರೌಡಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದರು.

ನಗರ ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು, ರೌಡಿಗಳ ಕಾಳಗ ಮತ್ತು ಗುಂಡಿನ ದಾಳಿಯಿಂದ ಎಚ್ಚೆತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೌಡಿಗಳ ಹೆಡೆಮುರಿ ಕಟ್ಟುವ ಎಚ್ಚರಿಕೆ ನೀಡಿದರು.

ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಗಡಿಪಾರು ಮಾಡುವ ಎಚ್ಚರಿಕೆ ನೀಡಿದರು.

ADVERTISEMENT

ಅಕ್ರಮವಾಗಿ ಪಿಸ್ತೂಲ್‌, ಚಾಕು, ಚೈನ್‌ ಸೇರಿದಂತೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಸುತ್ತಾಡುವಂತಿಲ್ಲ. ಕೋಕಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ರೌಡಿಗಳ ಸದ್ಯದ ಚಲನವಲಯದ ಬಗ್ಗೆ ಮಾಹಿತಿ ಪಡೆದರು. ಪರೇಡ್‌ನಲ್ಲಿ ವಿಜಯಪುರ ಉಪ ವಿಭಾಗ ವ್ಯಾಪ್ತಿಯ 115 ರೌಡಿಗಳು ಹಾಜರಾಗಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ, ಡಿವೈಎಸ್‌ಪಿ ಕೆ.ಸಿ.ಲಕ್ಷ್ಮಿ ನಾರಾಯಣ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.