ADVERTISEMENT

ಬಿಎಲ್‌ಡಿಇಯಲ್ಲಿ ಸಂಭ್ರಮ–2019

​ಪ್ರಜಾವಾಣಿ ವಾರ್ತೆ
Published 12 ಮೇ 2019, 15:24 IST
Last Updated 12 ಮೇ 2019, 15:24 IST
ವಿಜಯಪುರದ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ‘ಸಂಭ್ರಮ–2019’ ನಡೆಯಿತು
ವಿಜಯಪುರದ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ‘ಸಂಭ್ರಮ–2019’ ನಡೆಯಿತು   

ವಿಜಯಪುರ:‘ವೇಳೆ–ವೇಗಕ್ಕೆ ತಕ್ಕಂತೆ ನಮ್ಮ ನಿತ್ಯದ ಜೀವನ, ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಬಿಡದೆ, ಛಲದಿಂದ ಮುನ್ನುಗ್ಗಿ ಪಡೆದುಕೊಳ್ಳಬೇಕು’ ಎಂದು ಕೃಷಿ ಕಾಲೇಜಿನ ಡೀನ್‌ ಡಾ.ಎಸ್‌.ಎಂ.ಮುಂದಿನಮನಿ ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.

ನಗರದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ‘ಸಂಭ್ರಮ–2019’ರಲ್ಲಿ ಮಾತನಾಡಿದ ಅವರು, ‘ಈಚೆಗೆ ಕೃಷಿ ಕ್ಷೇತ್ರ ಹೆಚ್ಚು ಆಕರ್ಷಿತಗೊಳ್ಳುತ್ತಿದೆ. ಅಗ್ರಿಕಲ್ಚರ್ ಎಂಜಿನಿಯರಿಂಗ್‌ಗೂ ಸಾಕಷ್ಟು ಬೇಡಿಕೆಯಿದೆ’ ಎಂದರು.

ಕಾಲೇಜಿನ ಹಳೆಯ ವಿದ್ಯಾರ್ಥಿ, ಐಆರ್‌ಎಸ್‌ ಅಧಿಕಾರಿ ರವೀಂದ್ರ ಹತ್ತಳ್ಳಿ ವಿದ್ಯಾರ್ಥಿ ಸಮೂಹಕ್ಕೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು.

ADVERTISEMENT

ಉಪ ಪ್ರಾಂಶುಪಾಲ ಡಾ.ಪಿ.ಕೆ.ಗೊಣ್ಣಾಗರ ಸ್ವಾಗತ ಕೋರಿದರೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಗೀತಾಂಜಲಿ ಪಾಟೀಲ ವಾರ್ಷಿಕ ವರದಿ ಮಂಡಿಸಿದರು. ಕಾಲೇಜಿನ ಜನರಲ್ ಸೆಕ್ರೆಟರಿ ನಿಖಿಲ್ ಜಲಪುರ ವಂದಿಸಿದರು.

2017-18ನೇ ಸಾಲಿನ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. 2018-19ನೇ ಸಾಲಿನಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಮತ್ತು ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.