ADVERTISEMENT

ನಾಗಠಾಣ ಶಾಸಕರಿಗೆ ಭದ್ರತಾ ಸಿಬ್ಬಂದಿ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 12:35 IST
Last Updated 24 ಜೂನ್ 2018, 12:35 IST

ವಿಜಯಪುರ:‘ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರಿಗೆ ನನ್ನ ಅಧಿಕಾರ ಮಿತಿಯಲ್ಲೇ ಭದ್ರತಾ ಸಿಬ್ಬಂದಿ ನಿಯೋಜಿಸಿರುವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್ ತಿಳಿಸಿದರು.

‘ಶಾಸಕರು ಭಾನುವಾರ ಭೇಟಿಯಾಗಿ ಭದ್ರತಾ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭ ಬೆದರಿಕೆ ಕರೆ ಬಗ್ಗೆ ವಿಚಾರಿಸಿದೆ. ಮಾಹಿತಿ ನೀಡಲಿಲ್ಲ. ದೂರು ನೀಡುವಂತೆ ತಿಳಿಸಿದೆ’ ಎಂದು ಭಾನುವಾರ ಎಸ್‌ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಪ್ತಚರ ವಿಭಾಗದ ವತಿಯಿಂದ ಪಟ್ಟಿ ಬಂದ ಬಳಿಕ ಸಹಜವಾಗಿ ಎಲ್ಲ ಶಾಸಕರಿಗೂ ಭದ್ರತಾ ಸಿಬ್ಬಂದಿ ನೀಡುತ್ತೇವೆ. ನಾಗಠಾಣ ಶಾಸಕರು ಪಟ್ಟಿ ಬರುವ ಮುನ್ನವೇ ಮನವಿ ಮಾಡಿಕೊಂಡಿದ್ದರಿಂದ, ನನ್ನ ಅಧಿಕಾರ ವ್ಯಾಪ್ತಿಯಲ್ಲೇ ಸಿಬ್ಬಂದಿಯೊಬ್ಬರನ್ನು ನಿಯೋಜಿಸಿರುವೆ’ ಎಂದು ನಿಕ್ಕಂ ಹೇಳಿದರು.

ADVERTISEMENT

‘ಸಮಸ್ಯೆ ಇರುವುದರಿಂದ ಎಸ್‌ಪಿ ಭೇಟಿಯಾಗಿ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿರುವೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದಷ್ಟೇ ಶಾಸಕ ದೇವಾನಂದ ಚವ್ಹಾಣ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.