ADVERTISEMENT

ತಾಳಿಕೋಟೆ | ಕಾಲುಗಳಿಂದಲೇ ಪದವಿ ಪರೀಕ್ಷೆ ಬರೆದ ಬಾಗಮ್ಮ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 19:55 IST
Last Updated 22 ನವೆಂಬರ್ 2019, 19:55 IST
ತಾಳಿಕೋಟೆ ಪಟ್ಟಣದ ಎಸ್.ಕೆ.ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರಥಮ ಬಿ.ಎ. ಪರೀಕ್ಷೆಯನ್ನು ತನ್ನ ಎರಡೂ ಕೈಗಳಿದ್ದ ಮೈಲೇಶ್ವರದ ಬಾಗಮ್ಮ ಹೆಬ್ಬಾಳ ಕಾಲುಗಳಿಂದಲೇ ಪರೀಕ್ಷೆ ಬರೆದರು
ತಾಳಿಕೋಟೆ ಪಟ್ಟಣದ ಎಸ್.ಕೆ.ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರಥಮ ಬಿ.ಎ. ಪರೀಕ್ಷೆಯನ್ನು ತನ್ನ ಎರಡೂ ಕೈಗಳಿದ್ದ ಮೈಲೇಶ್ವರದ ಬಾಗಮ್ಮ ಹೆಬ್ಬಾಳ ಕಾಲುಗಳಿಂದಲೇ ಪರೀಕ್ಷೆ ಬರೆದರು   

ತಾಳಿಕೋಟೆ: ಪಟ್ಟಣದ ಖಾಸ್ಗತೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪದವಿ ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ತಾಲ್ಲೂಕಿನ ಮೈಲೇಶ್ವರ ಗ್ರಾಮದ ಬಾಗಮ್ಮ ಹೆಬ್ಬಾಳ ಕಾಲುಗಳಿಂದಲೇ ಪರೀಕ್ಷೆ ಬರೆದಳು.

ಬಾಲ್ಯದಿಂದಲೆ ತನ್ನೆರಡು ಕೈಗಳು ಮೋಟಾಗಿದ್ದರೂ, ಹೆತ್ತವರ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಕಾಲುಗಳಿಂದಲೇ ಬರೆಯುವ ರೂಢಿ ಮಾಡಿಕೊಂಡ ಬಾಗಮ್ಮ ಎಸ್.ಎಸ್.ಎಲ್ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ್ದರು.

‘ದೇವರು ನನಗೆ ಕೈ ಕೊಡದಿದ್ದರೇನು ಓದುವ ಹಂಬಲದಿಂದ ಕಾಲುಗಳಿಂದಲೇ ಬರೆಯುವ ರೂಢಿ ಮಾಡಿಕೊಂಡೆ. ವೇಗ ಕಡಿಮೆಯಾದರೂ ಸ್ಪಷ್ಟವಾಗಿ, ಸುಂದರವಾಗಿ ಬರೆಯುವುದನ್ನು ರೂಡಿಸಿಕೊಂಡಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ಪದವಿ ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣಳಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು

ADVERTISEMENT

‘ಅವಳ ಉತ್ಸಾಹ, ಆತ್ಮವಿಶ್ವಾಸ, ಪರಿಶ್ರಮ ಇತರರಿಗೆ ಮಾದರಿಯಾಗಿದೆ’ ಎಂದು ಪ್ರಾಚಾರ್ಯ ಡಾ.ಎಂ.ಎಸ್.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.