ADVERTISEMENT

ಭೀಮಾತೀರದ ಶೂಟೌಟ್ ಪ್ರಕರಣ: ಮತ್ತೊಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 7:32 IST
Last Updated 3 ನವೆಂಬರ್ 2020, 7:32 IST
ಲಕ್ಷ್ಮಣ ದಿಂಡೋರೆ
ಲಕ್ಷ್ಮಣ ದಿಂಡೋರೆ   

ವಿಜಯಪುರ: ನಗರದ ಹೊರವಲಯದ ಕನ್ನಾಳ ಕ್ರಾಸ್‌ ನಲ್ಲಿ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದ ಭೀಮಾ ತೀರದ ಶೂಟೌಟ್ ಪ್ರಕರಣದಲ್ಲಿ ಗುಂಡೇಟಿನಿಂದ ಹಾಗೂ ಟಿಪ್ಪರ್ ಡಿಕ್ಕಿ ಹೊಡೆದು ಕಾಲು ಮುರಿದುಹೋಗಿದ್ದ ಕಾಂಗ್ರೆಸ್ ಮುಖಂಡ, ರೌಡಿ ಶೀಟರ್ ಮಹಾದೇವ ಸಾಹುಕಾರ ಬೈರಗೊಂಡ ಅವರ ಕಾರು ಚಾಲಕ ಲಕ್ಷ್ಮಣ ದಿಂಡೋರೆ(26)ಮಂಗಳವಾರ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

ಮೂರು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಸಾಹುಕಾರ ಬೈರಗೊಂಡ ಜೀವಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಎಫ್‌ಎಸ್‌ಎಲ್‌ ತಂಡ: ಶೂಟೌಟ್ ನಡೆದ ಸ್ಥಳಕ್ಕೆ ಬೆಳಗಾವಿಯಿಂದ ಎಫ್ಎಸ್ಎಲ್ ಮೂವರ ತಂಡ ಮಂಗಳವಾರ ಭೇಟಿ ನೀಡಿ ಸಾಕ್ಷಧಾರಗಳನ್ನು ಸಂಗ್ರಹಿಸಿದೆ.

ADVERTISEMENT

ಸ್ಥಳದಲ್ಲಿ ಪೆಟ್ರೋಲ್ ಬಾಂಬ್, ನಂಬರ್ ಇಲ್ಲದ ಏಳು ಬೈಕುಗಳು ಪತ್ತೆಯಾಗಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಶೂಟೌಟ್ ಪ್ರಕರಣದಲ್ಲಿ ಸೋಮವಾರ ಮಹಾದೇವ ಬೈರಗೊಂಡ ಅವರ ಮ್ಯಾನೇಜರ್ ಬಾಬುರಾಯ ಕಂಚನಾಳ ಸ್ಥಳದಲ್ಲೇ ಸಾವನಪ್ಪಿದ್ದರು.

ಹಳೇ ವೈಷಮ್ಯದಿಂದ ದುಷ್ಕರ್ಮಿಗಳು ಬೈರಗೊಂಡ ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.