ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕಿನ 2025–30ನೇ ಸಾಲಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಳೆ ಬಣದ ಸದಸ್ಯರು ವಿಜಯೋತ್ಸವ ಆಚರಿಸಿದರು
ಪ್ರಜಾವಾಣಿ ಚಿತ್ರ
ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕಿನ 2025–30ನೇ ಸಾಲಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಹಳೆ ಪೆನಾಲ್ ಎಲ್ಲ ಕ್ಷೇತ್ರಗಳಲ್ಲೂ ಜಯ ಗಳಿಸಿ, ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿದಿದೆ.
ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಗುರುಪಾದಯ್ಯ (ಗುರು) ಗಚ್ಚಿನಮಠ (4791), ಶ್ರೀಹರ್ಷ ಪಾಟೀಲ(4396), ಈರಣ್ಣ ಪಟ್ಟಣಶೆಟ್ಟಿ(4072), ಕರುಣಾ ಔರಂಗಬಾದ್ (4054), ಸುರೇಶ ಗುರುಲಿಂಗಪ್ಪ ಗಚ್ಚಿನಕಟ್ಟಿ (4053), ವಿಜಯಕುಮಾರ ಇಜೇರಿ(3739), ಡಾ.ಸಂಜೀವ ಪಾಟೀಲ (3665), ವೈಜನಾಥ ಕರ್ಪೂರಮಠ (3632), ವಿಶ್ವನಾಥ ಪಾಟೀಲ (ಮಸಬಿನಾಳ) (3627), ರಾಜೇಂದ್ರ ಪಾಟೀಲ (ಉಪ್ಪಲದಿನ್ನಿ)(3624), ರಮೇಶ ಬಿದನೂರ(3615), ರವೀಂದ್ರ ಬಿಜ್ಜರಗಿ (3511) ಮತ್ತು ಪ್ರಕಾಶ ಬಗಲಿ (3417) ಆಯ್ಕೆಯಾಗಿದ್ದಾರೆ.
ಮಹಿಳಾ ಕ್ಷೇತ್ರಕ್ಕೆ ಬೋರಮ್ಮ ಗೊಬ್ಬರ(3122) ಮತ್ತು ಸೌಭಾಗ್ಯ ಭೋಗಶೆಟ್ಟಿ (3975), ಹಿಂದುಳಿದ ಪ್ರವರ್ಗ 1 ಗುರುರಾಜ ಗಂಗನಳ್ಳಿ (3990), ಹಿಂದುಳಿದ ಪ್ರವರ್ಗ 1 ರಾಜಶೇಖರ ಕತ್ತಿ (2383), ಪರಿಶಿಷ್ಟ ಜಾತಿ ಸಾಯಬಣ್ಣ ಭೋವಿ (2865), ಪರಿಶಿಷ್ಟ ಪಂಗಡ ಅಮೋಘಸಿದ್ದ ನಾಯ್ಕೋಡಿ (3806) ಆಯ್ಕೆಯಾಗಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು ಬ್ಯಾಂಕಿನ ಎದುರು ಭಾನುವಾರ ತಡರಾತ್ರಿಯೇ ಪಟಾಕಿ ಸಿಡಿಸಿ, ಗುಲಾಲ್ ಎರಚಿ, ಸಿಹಿ ಹಂಚಿದರು. ನೂತನ ನಿರ್ದೇಶಕರಿಗೆ ಮಾಲಾರ್ಪಣೆ ಜೊತೆಗೆ ಮೆರವಣಿಗೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.