ADVERTISEMENT

ದುಶ್ಚಟಗಳಿಂದ ಯುವಕರು ದೂರವಿರಬೇಕು: ಉಜ್ಜಿಯಿನಿ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:30 IST
Last Updated 19 ಅಕ್ಟೋಬರ್ 2024, 15:30 IST
<div class="paragraphs"><p>ಚಡಚಣ ಸಮೀಪದ&nbsp;ಗ್ರಾಮದಲ್ಲಿ ಶುಕ್ರವಾರ ಜರುಗಿದ&nbsp;&nbsp;ದೇವಿ ಉತ್ಸವದ&nbsp;ಸುವರ್ಣ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ಆಯೋಜಿಸಲಾದ ಧರ್ಮ ಸಭೆಯ&nbsp;&nbsp;ಸಾನಿಧ್ಯ ವಹಿಸಿ&nbsp;ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಚಾರ್ಯ&nbsp; ಆಶಿರ್ವಚನ ನೀಡಿದರು.</p></div>

ಚಡಚಣ ಸಮೀಪದ ಗ್ರಾಮದಲ್ಲಿ ಶುಕ್ರವಾರ ಜರುಗಿದ  ದೇವಿ ಉತ್ಸವದ ಸುವರ್ಣ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ಆಯೋಜಿಸಲಾದ ಧರ್ಮ ಸಭೆಯ  ಸಾನಿಧ್ಯ ವಹಿಸಿ ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಚಾರ್ಯ  ಆಶಿರ್ವಚನ ನೀಡಿದರು.

   

ಚಡಚಣ: ಸೂಫಿ ಸಂತರ ತಾಣ, ಐತಿಹಾಸಿಕ ಜಕ್ಕವ್ವನ ಕೋಟೆ, ಪರಮ ತಪೋಮೂರ್ತಿ ಅಲ್ಲಮಪ್ರಭುಗಳು ನೆಲೆಸಿದ ಪುಣ್ಯಸ್ಥಳ, ಜನಪದ ಸಾಹಿತ್ಯದ ತವರೂರಾದ ಹಲಸಂಗಿ ಗ್ರಾಮವು ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದು ಉಜ್ಜಿಯಿನಿ ಸಿದ್ಧಲಿಂಗ ಶಿವಚಾರ್ಯ ಭಗವತ್ಪಾದರು ಹೇಳಿದರು.

ಚಡಚಣ ಸಮೀಪದ ಹಲಸಂಗಿ ಗ್ರಾಮದಲ್ಲಿ ಶುಕ್ರವಾರ ಜರುಗಿದ ಶ್ರೀದೇವಿ ಉತ್ಸವದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ADVERTISEMENT

‘ಭಾರತ ವಿಶ್ವದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿದ ಅತ್ಯಂತ ಶ್ರೀಮಂತ ದೇಶ. ಯುವ ಜನಾಂಗ ಮಾದಕ ಪದಾರ್ಥಗಳಿಂದ ದೂರವಿದ್ದು, ಒಳ್ಳೆಯ ಸಂಸ್ಕಾರ ಹೊಂದಿ ಶಿಕ್ಷಣವಂತರಾಗಬೇಕು. ಕಲಂ 370 ತಿದ್ದುಪಡಿ ತಂದ ನಂತರ ಕಾಶ್ಮಿರ ಇಂದು ಮೊದಲಿನಂತೆ ಸ್ವರ್ಗದಂತಾಗಿದೆ. ಸ್ವರ್ಗದ ಹಾಗೆ ಕಾಣುತ್ತಿದೆ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿದ್ದಾರೆ. ಉತ್ತಮ ಆಡಳಿತ, ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದು ಅಲ್ಲಿನ ಜನತೆ ನಿಟ್ಟುಸಿರು ಬಿಡುವುದಕ್ಕೆ ಕೇಂದ್ರದ ಸರ್ಕಾರದ ಶ್ರಮ ಅಡಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಮಾತನಾಡಿ, ರಾಜ್ಯದಲ್ಲಿ ಮದ್ಯಪಾನ ನಿಷೇಧ ಅಗತ್ಯ. ಪ್ರತಿ ಮನೆಯಲ್ಲಿ ಯುವಕರು ಮದ್ಯಪಾನಕ್ಕೆ ದಾಸರಾಗಿದ್ದಾರೆ. ಆದ್ದರಿಂದ ಸರ್ಕಾರ ಮದ್ಯ ನಿಷೇಧಿಸಿ, ವ್ಯಸನ ಮುಕ್ತ ಗ್ರಾಮಗಳನ್ನಾಗಿಸಬೇಕು ಎಂದರು.

ಮರಗೂರ ಭಿಮಾಶಂಕರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಂ.ಆರ್.ಪಾಟೀಲ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಉತ್ತಮ ಸಂಸ್ಕಾರವಿಲ್ಲದೆ ಸಮುದಾಯ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಮಾಳಕವಠೆ ಪಂಚಾಕ್ಷರಿ ಸ್ವಾಮೀಜಿ, ಹತ್ತಳ್ಳಿ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೆಶ್ವರ ಸ್ವಾಮೀಜಿ, ತದ್ದೇವಾಡಿಯ ಗುರು ಚಂದ್ರಶೇಖರ ದೇವರು, ಮಾಹಾಂತೇಶ ಸ್ವಾಮೀಜಿ, ಪ್ರವಚನ ಭಾಸ್ಕರ ರೇವಣಸಿದ್ದಯ್ಯ ಹಿರೇಮಠ, ಜೇನಾಪುರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತೀಶ ಮನಮಿ, ಮುಖಂಡ ರೇವಗೊಂಡಪ್ಪ ಪಾಟೀಲ, ಸಿದ್ದಾರಾಮ ನಿಚ್ಚಳ, ಅಶೋಕ ಕುಲಕರ್ಣಿ, ವಿಶ್ವನಾಥ ಪೂಜಾರಿ, ಮಲ್ಲಯ್ಯ ಹಿರೇಮಠ, ಬಾಬಾಸಾಹೇಬ ವಿಜಯಪುರ, ಪರ್ವೇಜ್‌ ಪಟೇಲ್‌, ರುಕ್ಮುದ್ದೀನ್‌ ತದ್ದೇವಾಡಿ ಇತರರು ಇದ್ದರು.

ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ

ಧರ್ಮ ಸಭೆಯ ಮೊದಲು ಹಲಸಂಗಿ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಿತು. ಮೆರವಣಿಗೆಯಲ್ಲಿ 251 ಜನ ಮಹಿಳೆಯರು ಕುಂಭ ಹೊತ್ತು ಸಾಗಿದರು. ಮಹಿಳೆಯರಿಂದ ಆರತಿ ಡೊಳ್ಳು ಗೊಂಬೆ ಕುಣಿತ ಸೇರಿದಂತೆ ಸಕಲ ಸಂಗೀತ ವಾದ್ಯಗಳ ಕಲಾ ತಂಡಗಳು ಪಾಲ್ಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.