ADVERTISEMENT

ಸರಳತೆಯ ಬದುಕಿನ ಮಾದರಿ ಸಿದ್ಧೇಶ್ವರಶ್ರೀ: ಬಾಲಶಿವಯೋಗಿ ಸಿದ್ದಲಿಂಗ ದೇವರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:43 IST
Last Updated 3 ಜನವರಿ 2026, 5:43 IST
ತಾಳಿಕೋಟೆ ಪಟ್ಟಣದ ಬಸಬೇಶ್ವರ ವೃತ್ತದ ಬಳಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸಿದ್ಧೇಶ್ವರ ಶ್ರೀಗಳ ನುಡಿನಮನದಲ್ಲಿ ಖಾಸ್ಗತಮಠದ ಪೀಠಾಧಿಪತಿ ಸಿದ್ಧಲಿಂಗದೇವರು ಶುಕ್ರವಾರ ಮಾತನಾಡಿದರು
ತಾಳಿಕೋಟೆ ಪಟ್ಟಣದ ಬಸಬೇಶ್ವರ ವೃತ್ತದ ಬಳಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸಿದ್ಧೇಶ್ವರ ಶ್ರೀಗಳ ನುಡಿನಮನದಲ್ಲಿ ಖಾಸ್ಗತಮಠದ ಪೀಠಾಧಿಪತಿ ಸಿದ್ಧಲಿಂಗದೇವರು ಶುಕ್ರವಾರ ಮಾತನಾಡಿದರು   

ತಾಳಿಕೋಟೆ: ಜ್ಞಾನದ ಮತ್ತೊಂದು ಅರ್ಥವೇ ಸಿದ್ದೇಶ್ವರ ಸ್ವಾಮೀಜಿ ಎನ್ನುವಂತೆ ಬದುಕಿದವರು. ಅತ್ಯಂತ ಸರಳ ಬದುಕನ್ನು ನಡೆಸುವ ಮೂಲಕ ಇಡೀ ಜಗತ್ತಿಗೆ ಸರಳತೆಯ ಮಾದರಿ ಬದುಕು ತೋರಿದ ಮಹಾತ್ಮರು ಸಿದ್ದೇಶ್ವರ ಶ್ರೀಗಳು ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಹೇಳಿದರು.

ಅವರು ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಮಾನಸಿಂಗ್ ಕೊಕಟನೂರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸಿದ್ದೇಶ್ವರ ಶ್ರೀಗಳ 3ನೇ ವರ್ಷದ ನುಡಿ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಿದ್ದೇಶ್ವರ ಶ್ರೀಗಳು ಜ್ಞಾನ ಸಾಗರವಾಗಿದ್ದರು. ಅವರ ಪ್ರವಚನಗಳು ಅತ್ಯಂತ ಪ್ರಭಾವಶಾಲಿಯಾಗಿದ್ದವು. ನಾವುಗಳು ಕೇವಲ ಮಾತನಾಡುತ್ತೇವೆ. ಆದರೆ ಅವರು ಮಾತನಾಡಿದಂತೆ ನಡೆದು ತೋರಿಸಿದರು. ಅವರ ನಡೆ ಮತ್ತು ನುಡಿ ಎರಡೂ ಒಂದಾಗಿದ್ದವು. ಈ ಕಾರಣಕ್ಕಾಗಿಯೇ ಜಗತ್ತು ಅವರನ್ನು ಶತಮಾನದ ಸಂತ ಎಂದು ಒಪ್ಪಿಕೊಂಡಿತು ಎಂದರು.

ADVERTISEMENT

ಶರಣ ಸಾಹಿತ್ಯ ಪರಿಷತ್ತಿನ ಜಿ ಎಸ್ ಜಮ್ಮಲದಿನ್ನಿ, ಪತ್ರಕರ್ತ ಅಬ್ದುಲ್ ಗನಿ ಮಕಾನದಾರ, ಗಂಗಾಧರ ಕಸ್ತೂರಿ ರಾಘವೇಂದ್ರ ವಿಜಾಪುರ ನುಡಿ ನಮನಗಳನ್ನು ಸಲ್ಲಿಸಿದರು.

ಮಾನಸಿಂಗ್ ಕೊಕಟನೂರ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತೇಶ ಮುರಾಳ ಕಾರ್ಯಕ್ರಮ ನಿರ್ವಹಿಸಿದರು. ಈ ಸಮಯದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಡಾ.ವಿ.ಎಸ್.ಕಾರ್ಚಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಎಚ್.ಎಸ್.ಪಾಟೀಲ (ಬಾವೂರ), ಕಾಶಿನಾಥ ಮುರಾಳ, ಎಂ.ಎಸ್. ಸರಶೆಟ್ಟಿ, ಸುವರ್ಣಾ ಬಿರಾದಾರ, ಮುತ್ತು ಕಶೆಟ್ಟಿ, ದ್ಯಾಮನಗೌಡ ಪಾಟೀಲ, ಎಂ ಕೆ ಮೇತ್ರಿ,ಅಮಿತಸಿಂಗ್ ಮನಗೂಳಿ,ನಾಗೇಶ ಕಟ್ಟಿಮನಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹಬೂಬ ಕೆಂಭಾವಿ, ವೀರೇಶ ಬಾಗೇವಾಡಿ, ಬಸವರಾಜ ಮದರಕಲ್ಲ,ರಾಮನಗೌಡ ಬಾಗೇವಾಡಿ, ಎಂ.ಎಸ್.ನಾಗರಾಳ, ಈಶ್ವರ ಹೂಗಾರ, ರಾಘು ಮಾನೆ, ಶಫೀಕ ಇನಾಮದಾರ, ಗೋಪಾಲ ಕಟ್ಟಿಮನಿ, ಬಳಗದ ಪದಾಧಿಕಾರಿಗಳು ಇತರರು ಇದ್ದರು.

‘ಸಿದ್ಧೇಶ್ವರ ಶ್ರೀ ತೋರಿದ ಸುಂದರ ಜೀವನ’

ಹೊರ್ತಿ: ಅಧ್ಯಾತ್ಮಿಕ ಚೇತನ ಹಾಗೂ ಸಂತರಲ್ಲಿ ಮಹಾನ್ ಸಂತರಾಗಿ ಸಿದ್ಧೇಶ್ವರ ಸ್ವಾಮೀಜಿ ಅವರ ಸರಳ ಹಾಗೂ ಸುಂದರ ಮತ್ತು ಆದರ್ಶ ಜೀವನದ ಕುರಿತು ತೋರಿದ ಮಾರ್ಗಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ' ಎಂದು ಹೊರ್ತಿ ಎಲ್ ಟಿ-2 ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಶಿವೂರ ಹೇಳಿದರು.

ಹೊರ್ತಿಯ ಜನ ಔಷಧಿ ಹಾಗೂ ಮಸಳಿಕೇರಿ ಹಾಲಿನ ಡೇರಿ ಮತ್ತು ಎಲ್ ಟಿ-2 ಹೊರ್ತಿ ಪಿಕೆಪಿಎಸ್ ಎದುರು ಮುಂದೆ ಶುಕ್ರವಾರ ಹಮ್ಮಿಕೊಂಡಿದ್ದ ಸಿದೇಶ್ವರ ಸ್ವಾಮೀಜಿ ಅವರ ಮೂರನೇ ವರ್ಷದ ಗುರುನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಜನ ಔಷಧ ಕೇಂದ್ರದ ಶಿವಾನಂದ ಮೇತ್ರಿ ಮಾತನಾಡಿದರು.

ಕಾರ್ಯಕ್ರಮದ ಮುನ್ನ ಎಲ್ಲರೂ ಪೂಜ್ಯ ಶ್ರೀಸಿದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಶಿವೂರ, ಉಪಾಧ್ಯಕ್ಷ ರಮಾಕಾಂತ ಬಿರಾದಾರ, ಮಲ್ಲಿಕಾರ್ಜುನ ಮಸಳಿಕೇರಿ, ದುಂಡಪ್ಪ ತಾಂಬೆ, ಶರಣು ಡೊಣಗಿ, ಮಲ್ಲಿಕಾರ್ಜುನ ಮೇತ್ರಿ, ಸಿದ್ದು ಡೊಳ್ಳಿ, ಶರಣಬಸಪ್ಪ ಡೊಣಗಿ, ಶಿವಾನಂದ ಕಾಂಬಳೆ, ಪವನ ಕುಲಕರ್ಣಿ, ಮಲ್ಲಿಕಾರ್ಜುನ ಕಾಂಬಳೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.