ಇಂಡಿ: ಅಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಇಂಡಿ ತಾಲ್ಲೂಕಿನ ಪ್ರಸಿದ್ಧ ದೇವಸ್ಥಾನಗಳಾದ ಇಂಡಿಯ ಶಾಂತೇಶ್ವರ, ದಾನಮ್ಮದೇವಿ ಸೇರಿದಂತೆ ಇನ್ನಿತರ ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯ ಕಾರ್ಯಕ್ರಮ ನಡೆದವು.
ಶಾಂತೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಬಿ.ಎಸ್.ಪಾಟೀಲ ಹಿರೇಬೇವನೂರ, ಅನೀಲ ಜಮಾದಾರ, ಶಾಂತು ಕಂಬಾರ, ಮಂಜು ದೇವರ, ಸೋಮು ನಿಂಬರಗಿಮಠ, ಸಂಜು ದಶವಂತ, ಪ್ರಶಾಂತ ಗವಳಿ, ವಿಜುಗೌಡ ಪಾಟೀಲ, ಸಾಗರ ಬಿರಾದಾರ, ಪ್ರೇಮ ರಾಠೋಡ, ಅಶೋಕಗೌಡ ಬಿರಾದಾರ ಇದ್ದರು.
ದಾನಮ್ಮದೇವಿ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅನೀಲ ಪ್ರಸಾದ ಏಳಗಿ ಅವರ ಅಧ್ಯಕ್ಷತೆಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.