ADVERTISEMENT

ಸೋಲಾಪುರ ಪಾಲಿಕೆ ಬಿಜೆಪಿ ತೆಕ್ಕೆಗೆ

ಒಟ್ಟು 102 ಸ್ಥಾನಗಳ ಪೈಕಿ 87ರಲ್ಲಿ ಗೆಲುವು; ಬಿಜೆಪಿಗರ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:12 IST
Last Updated 17 ಜನವರಿ 2026, 6:12 IST
<div class="paragraphs"><p> ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ </p></div>

ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ

   

ಸೋಲಾಪುರ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 87 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಒಟ್ಟು 102 ಸ್ಥಾನಗಳಿಗೆ ಜನವರಿ 15ರಂದು ಚುನಾವಣೆ ನಡೆದಿತ್ತು. ಎಂಐಎಂ 8, ಕಾಂಗ್ರೆಸ್ 2, ಶಿಂಧೆ ಶಿವಸೇನೆ 4, ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (ಅಜಿತ ಪವಾರ) 1 ಸ್ಥಾನ ಗಳಿಸಿದವು.

ADVERTISEMENT

ಸೋಲಾಪುರದಲ್ಲಿ ಬಿಜೆಪಿ ಮೊದಲಿನಿಂದಲೂ ಪ್ರಾಬಲ್ಯ ಹೊಂದಿದೆ. ಈ ಬಾರಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ತೀವ್ರ ಸವಾಲಿನ ನಡುವೆಯೂ ಮತದಾರರು ಬಿಜೆಪಿ ಪರ ಸ್ಪಷ್ಟ ತೀರ್ಪು ನೀಡಿದ್ದಾರೆ. ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ (ಉದ್ಧವ್‌ ಬಾಳಾಸಾಹೇಬ್ ಠಾಕ್ರೆ) ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ ಎಂದು ಮುಖಂಡರು ವಿಶ್ಲೇಷಿಸಿದರು.

‘ನಗರದ ಅಭಿವೃದ್ಧಿ, ಮೂಲಸೌಕರ್ಯ, ನೀರು, ರಸ್ತೆ, ಸ್ವಚ್ಛತೆ ಮತ್ತು ಆಡಳಿತದ ವಿಷಯಗಳಲ್ಲಿ ಬಿಜೆಪಿ ಮಾಡಿದ ಉತ್ತಮ ಕಾರ್ಯಗಳನ್ನು ಮತದಾರರು ಮೆಚ್ಚಿ, ಮತ ನೀಡಿದ್ದಾರೆ’ ಎಂದು ಬಿಜೆಪಿ ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟರು.

ಪರಾಭವಗೊಂಡ ಪ್ರಮುಖರು: ಮಾಜಿ ಮೇಯರ್‌ಗಳಾದ ಮನೋಹರ ಸಪಾಟೆ, ಅಲಕಾ ರಾಥೋಡ, ಯು.ಎನ್. ಬೋರಿಯಾ, ಸಂಜಯ ಹೋಮಗುಡಿ, ಆರಿಫ್ ಶೇಖ್‌ ಅವರನ್ನು ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.