
ವಿಜಯಪುರ: ಸುಮಾರು 1000 ವರ್ಷಗಳ ಹಿಂದೆ ಮಹಮದ್ ಘಜ್ನಿ ದಾಳಿಯಿಂದ ಲೂಟಿಯಾಗಿದ್ದರೂ, 17 ಬಾರಿ ದಾಳಿಗೊಳಗಾದರೂ ಪ್ರತಿ ಬಾರಿಯೂ ಭಕ್ತರ ಶ್ರದ್ಧೆಯಿಂದ ಮತ್ತೆ ಮತ್ತೆ ಎದ್ದು ನಿಂತ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ 1951ರ ಮೇ 11ರಂದು ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಜ್ಯೋತಿರ್ಲಿಂಗವನ್ನು ಪುನಃ ಪ್ರತಿಷ್ಠಾಪಿಸಿದ ಘಟನೆಗೆ ಇದೀಗ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದಲ್ಲಿನ 400 ವರ್ಷಗಳಷ್ಟು ಪುರಾತನ ಶಿವನ ದೇವಾಲಯವಾದ ಸುಂದರೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆಯನ್ನು ನೆರವೇರಿಸಲಾಯಿತು. ಈ ಮೂಲಕ ಸೋಮನಾಥ ದೇವಾಲಯವು ಸನಾತನ ಧರ್ಮದ ಅದಮ್ಯ ಚೇತನದ ಪ್ರತೀಕ ಎಂಬುದನ್ನು ಸ್ಮರಿಸಲಾಯಿತು.
ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮಾತನಾಡಿ, ಸೋಮನಾಥ ದೇವಾಲಯದ ಸಂಪೂರ್ಣ ಇತಿಹಾಸ, ಅದರ ಮೇಲೆ ನಡೆದ ಆಕ್ರಮಣಗಳು ಹಾಗೂ ದೇವಾಲಯದ ಪುನರುತ್ಥಾನದ ಪ್ರಮುಖ ಬೆಳವಣಿಗೆಗಳ ಬಗ್ಗೆ ತಿಳಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಸುರೇಶ ಬಿರಾದಾರ, ಉಮೇಶ ಕಾರಜೋಳ, ಚಿದಾನಂದ ಚಲವಾದಿ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಜೋಗೂರ, ಭೀಮಾಶಂಕರ ಹದನೂರ, ಕೃಷ್ಣಾ ಗುನ್ಹಾಳಕರ, ಸಂದೀಪ ಪಾಟೀಲ, ಶರಣಬಸು ಕುಂಬಾರ, ಭೀಮಸಿಂಗ ರಾಠೋಡ, ಚಿನ್ನು ಚಿನಗುಂಡಿ, ಭರತ ಕುಲಕರ್ಣಿ, ಭಾರತಿ ಭುಯ್ಯಾರ, ರಾಜಶೇಖರ ಬಾಗಲಕೋಟ, ಅಪ್ಪು ಕುಂಬಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.