
ಸೋಲಾಪುರ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಂದು ಮುಂಬೈಗೆ ಅಭಿವಂದನೆ ಸಲ್ಲಿಸಲು ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೆಯ ಮೂಲಕ ವಿಶೇಷ ರೈಲುಗಳು ಸಂಚರಿಸಲಿದೆ.
ರೈಲು ಸಂಖ್ಯೆ 01245 ವಿಶೇಷ ರೈಲು ಕಲಬುರಗಿ ಯಿಂದ ಡಿಸೆಂಬರ್ 5 ರಂದು ಸಂಜೆ 06:30 ಕ್ಕೆ ಹೊರಟು ಮತ್ತು ಮರುದಿನ ದಿನ ಬೆಳಿಗ್ಗೆ 08:20 ಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್, ಮುಂಬೈ ತಲುಪಲಿದೆ. ಸೋಲಾಪುರ: ಆಗಮನ – ರಾತ್ರಿ 09:40, ನಿರ್ಗಮನ– ರಾತ್ರಿ 10:20.
ರೈಲು ಸಂಖ್ಯೆ 01246 ವಿಶೇಷ ರೈಲು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಮುಂಬೈ ಯಿಂದ ಡಿಸೆಂಬರ್ 7ರಂದು ಮಧ್ಯರಾತ್ರಿ 12:25 ಕ್ಕೆ ಹೊರಟು ಬೆಳಿಗ್ಗೆ 11:30 ಕ್ಕೆ ಕಲಬುರಗಿ ತಲುಪಲಿದೆ. ಸೋಲಾಪುರ: ಆಗಮನ – ಬೆಳಿಗ್ಗೆ 08:45,ನಿರ್ಗಮನ – ಬೆಳಿಗ್ಗೆ 09:00, ನಿಲುಗಡೆ:ಗಾಣಗಾಪುರ ರಸ್ತೆ, ಅಕ್ಕಲಕೋಟ ರಸ್ತೆ, ಸೋಲಾಪುರ, ಕುರ್ಡುವಾಡಿ, ದೌಂಡ್, ಪುಣೆ, ಲೋಣಾವಳಾ, ಕಲ್ಯಾಣ ಮತ್ತು ದಾದರ್.
ಟಿಕೆಟ್ ಬುಕ್ಕಿಂಗ್:ಟಿಕೆಟ್‌ಗಳು ನಿಲ್ದಾಣದ ಬುಕಿಂಗ್ ಕೌಂಟರ್‌ಗಳಲ್ಲಿ ಹಾಗೂ UTS ಆಪ್‌ನಲ್ಲಿ ಲಭ್ಯವಿವೆ.
ಪ್ರಯಾಣಿಕರು ಮಹಾಪರಿನಿರ್ವಾಣ ದಿನದ ನಿಮಿತ್ತ ಸಂಚರಿಸಲಿರುವ ವಿಶೇಷ ರೈಲುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಸೋಲಾಪುರ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ನಿರ್ವಾಹಕ ಯೋಗೇಶ್ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.