
ತಾಳೆಕೋಟೆ: ‘ಇಂದು ಹೆಚ್ಚಿನವರ ಬಳಿ ಜೀವನಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳೂ ಇವೆ. ಆದರೆ ಮನುಷ್ಯನಿಗೆ ಅವಶ್ಯಕವಾದ ಶಾಂತಿ ಮತ್ತು ನೆಮ್ಮದಿ ಇಲ್ಲವಾಗಿದೆ. ಅದನ್ನು ಪಡೆದುಕೊಳ್ಳಲು ಜೀವನದಲ್ಲಿ ಅಧ್ಯಾತ್ಮ ಅಳವಡಿಸಿಕೊಳ್ಳುವುದು ಅತ್ಯಗತ್ಯ’ ಎಂದು ನೇತ್ರ ತಜ್ಞ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ಅವರು ತಾಲ್ಲೂಕಿನ ನಾವದಗಿ ಗ್ರಾಮd ಬ್ರಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ರ್ಶಿವಾಚಾರ್ಯ ಸ್ವಾಮೀಜಿಯ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
‘ಪತಿ-ಪತ್ನಿ ಸಂಸಾರ ರಥದ ಎರಡು ಚಕ್ರಗಳು. ಅವು ಸರಿಯಾಗಿ ನಡೆದಾಗ ಸಂಸಾರದಲ್ಲಿ ಸುಖಶಾಂತಿ ನೆಮ್ಮದಿ ಇರುತ್ತದೆ. ತಂದೆ- ತಾಯಿ ಮಕ್ಕಳಿಗೆ ಸಂಸ್ಕಾರ ನೀಡಬೇಕು. ನಮ್ಮ ಯುವ ಜನ ವ್ಯಸನಿಗಳಾಗುವುದನ್ನು ತಪ್ಪಿಸಬೇಕು. ಆರೋಗ್ಯದಿಂದ ಬದುಕು ಸಾಗುವಂತಾಗಬೇಕು’ ಎಂದರು.
ರಾಜ ಗುರುರಾಜೇಂದ್ರ ಒಡೆಯರ್ ಶಿವಾಚಾರ್ಯರು, ಶಂಕರಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ನಾವದಗಿ ಶ್ರೀಯವರಿಗೆ ಮಸ್ಕಿ ತಾಲ್ಲೂಕಿನ ಸುರೇಶ ದಿನ್ನಿಬಾಯಿ ಕುಟುಂಬದ ಸದಸ್ಯರಿಂದ ತುಲಾಭಾರ, ತಾಳಿಕೋಟೆ ಜಂಗಮ ಸಮಾಜದಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು. 300 ಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬಲಾಯಿತು. ವೇದಿಕೆಯಲ್ಲಿ ಶೋಭಾ ಅಮ್ಮನವರು, ರೇಣುಕಾ ಅಮ್ಮನವರು, ಡಾ.ಎಸ್.ಎಸ್.ದೇಸಾಯಿ, ಪುರಾಣಿಕ ರಾಚಯ್ಯ ಹಿರೇಮಠ, ಡಾ. ಸೋಮಶೇಖರಯ್ಯ ಹಿರೇಮಠ, ಸಾಹಿತಿ ಬಸವರಾಜ ಗೊರಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.