ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಅಬ್ಬರದ ಗಾಳಿ, ಮಳೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 15:13 IST
Last Updated 15 ಮೇ 2021, 15:13 IST
ವಿಜಯಪುರದ ನಗರದಲ್ಲಿ ಗಾಳಿ ಮಳೆಗೆ ಹರಿದುಬಿದ್ದಿರುವ ನೆರಳಿನ ಪರದೆ 
ವಿಜಯಪುರದ ನಗರದಲ್ಲಿ ಗಾಳಿ ಮಳೆಗೆ ಹರಿದುಬಿದ್ದಿರುವ ನೆರಳಿನ ಪರದೆ    

ವಿಜಯಪುರ: ಚಂಡಮಾರುತದ ಪರಿಣಾಮ ಶನಿವಾರ ಜಿಲ್ಲೆಯಾದ್ಯಂತ ಅಬ್ಬರದ ಗಾಳಿಯೊಂದಿಗೆ ಧಾರಾಕಾರ ಮಳೆಯಾಯಿತು.

ಬೆಳಿಗ್ಗೆಯಿಂದಲೇ ರಭಸದ ಗಾಳಿ ಬೀಸುತ್ತಿತ್ತು. ಮಧ್ಯಾಹ್ನದ ಬಳಿಕ ಮೋಡಗಳುದಟ್ಟೈಸಿದವು. ಬಳಿಕ ಆಗಾಗ ಧಾರಾಕಾರ ಮಳೆ ಸುರಿಯುವ ಮೂಲಕ ಬೇಸಿಗೆಯಲ್ಲಿ ಮುಂಗಾರು ವಾತಾವರಣ ನಿರ್ಮಾಣವಾಗಿತ್ತು.

ವಿಜಯಪುರ ನಗರದ ಪ್ರಮುಖ ವೃತ್ತದಲ್ಲಿ ವಾಹನ ಚಾಲಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಳವಡಿಸಿದ್ದ ನೆರಳಿನ ಪರದೆಗಳು ಗಾಳಿಯ ಅಬ್ಬರಕ್ಕೆ ಹರದಿ, ಬಿದ್ದಿತು. ಮಳೆಯ ಪರಿಣಾಮ ಮಲೆನಾಡಿನಂತೆ ನಗರ ಕಂಡುಬಂದಿತು.

ADVERTISEMENT

ಸಿಂದಗಿ, ಹೊರ್ತಿ, ಕಲಕೇರಿ, ಕೊಲ್ಹಾರ, ಬಸವನ ಬಾಗೇವಾಡಿ, ಆಲಮಟ್ಟಿ, ತಾಳಿಕೋಟೆ, ತಾಲತವಾಡ, ಮುದ್ದೇಬಿಹಾಳದಲ್ಲೂ ಗಾಳಿಯೊಂದಿಗೆ ಮಳೆ ಸುರಿಯಿತು.

ಗಾಳಿಯ ಪರಿಣಾಮ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.