ADVERTISEMENT

ವಿದ್ಯಾರ್ಥಿ ಶೈಕ್ಷಣಿಕ ದತ್ತು ಪಡೆದ ಜೆಸಿಐ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 12:00 IST
Last Updated 9 ಸೆಪ್ಟೆಂಬರ್ 2020, 12:00 IST
ಗೋಕಾಕ ಬಿಇಒ ಕಚೇರಿಯಲ್ಲಿ ಮಂಗಳವಾರ ಜೆಸಿಐ ಸಂಸ್ಥೆಯವರು ಪ್ರತಿಭಾನ್ವಿತ ವಿದ್ಯಾರ್ಥಿ ಧರೆಪ್ಪ ಸುಳನವರ ಅವರನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿದ್ದನ್ನು ಘೋಷಿಸಿದರು
ಗೋಕಾಕ ಬಿಇಒ ಕಚೇರಿಯಲ್ಲಿ ಮಂಗಳವಾರ ಜೆಸಿಐ ಸಂಸ್ಥೆಯವರು ಪ್ರತಿಭಾನ್ವಿತ ವಿದ್ಯಾರ್ಥಿ ಧರೆಪ್ಪ ಸುಳನವರ ಅವರನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿದ್ದನ್ನು ಘೋಷಿಸಿದರು   

ಗೋಕಾಕ: ನಾಗನೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯು (ಕಲಾ ವಿಭಾಗ) ವಾರ್ಷಿಕ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕಗಳನ್ನು ಪಡೆದಿರುವ ಮೂಡಲಗಿ ತಾಲ್ಲೂಕು ನಾಗನೂರಿನ ಧರೆಪ್ಪ ಸುಳನವರ ಅವರನ್ನು ಇಲ್ಲಿನ ಜೆಸಿಐ ಕ್ಲಬ್ ಶೈಕ್ಷಣಿಕ ದತ್ತು ಪಡೆದಿದೆ.

ಬಿಇಒ ಕಚೇರಿಯಲ್ಲಿ ಈ ಘೋಷಣೆ ಮಾಡಲಾಯಿತು. ಬಿಇಒ ಜಿ.ಬಿ. ಬಳಿಗಾರ ಅವರ ಸಲಹೆಯಂತೆ ಸಂಸ್ಥೆಯು ಸಹಾಯಹಸ್ತ ಚಾಚಿದೆ ಎಂದು ತಿಳಿಸಲಾಯಿತು. ವಿದ್ಯಾರ್ಥಿಯ ವ್ಯಾಸಂಗಕ್ಕೆ ತಗಲುವ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಪದಾಧಿಕಾರಿಗಳು ವಾಗ್ದಾನ ಮಾಡಿದರು.

ವಲಯ ಸಂಯೋಜಕ ವಿಷ್ಣು ಲಾತೂರ, ‘ವಿದ್ಯಾರ್ಥಿ ಅಪೇಕ್ಷಿಸುವ ಕಾಲೇಜಿಗೆ ಪ್ರವೇಶ ಕೊಡಿಸಲಾಗುವುದು. ಸ್ನಾತಕೋತ್ತರ ಅಧ್ಯಯನದತ್ತ ಒಲವು ಹೊಂದಿದ್ದರೂ ಅದಕ್ಕೂ ನೆರವಾಗುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಸಂಸ್ಥೆಯು ಮುಂದೆಯೂ ಇಂತಹ ಜನಪರ ಕಾರ್ಯಗಳನ್ನು ಬೆಂಬಲಿಸಲಿ’ ಎಂದು ಬಿಇಒ ಬಳಿಗಾರ ಆಶಿಸಿದರು.

ಅಧ್ಯಕ್ಷ ರಜನಿಕಾಂತ ಮಾಳೋದೆ, ರಾಚಪ್ಪ ಅಮ್ಮಣಗಿ, ಶೇಖರ ಉಳ್ಳೇಗಡ್ಡಿ, ಮೀನಾಕ್ಷಿ ಸವದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.