ADVERTISEMENT

ಸಿಂದಗಿ| ಪ್ರತಿ ಟನ್ ಕಬ್ಬಿಗೆ ₹3,160 ದರ ನೀಡಿ: ಕಬ್ಬು ಬೆಳೆಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:02 IST
Last Updated 15 ನವೆಂಬರ್ 2025, 6:02 IST
<div class="paragraphs"><p>ಸಿಂದಗಿ ತಾಲ್ಲೂಕಿನ ಯರಗಲ್ ಕೆ.ಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ₹3,160&nbsp; ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು</p></div>

ಸಿಂದಗಿ ತಾಲ್ಲೂಕಿನ ಯರಗಲ್ ಕೆ.ಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ₹3,160  ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು

   

ಸಿಂದಗಿ: ಪ್ರತಿ ಟನ್ ಕಬ್ಬಿಗೆ ₹3,160 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ತಾಲ್ಲೂಕಿನ ಯರಗಲ್ ಕೆ.ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬಂದ್ ಮಾಡಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಮುಂದುವರೆದಿತ್ತು.

ಮನ್ನಾಪುರ, ಬಂಕಲಗಿ, ನಾಗಾವಿ ಬಿ.ಕೆ. ಗೊರವಗುಂಡಗಿ, ಗಬಸಾವಳಗಿ, ಬಂಟನೂರ, ಆಹೇರಿ ಮುಂತಾದ ಗ್ರಾಮಗಳ ಕಬ್ಬು ಬೆಳೆಗಾರರು ಹೆದ್ದಾರಿಯಲ್ಲಿ ಕುಳಿತು ಕೈಯಲ್ಲಿ ಹಸಿರು ಶಲ್ಲೆ ತಿರುಗಿಸುತ್ತ ಘೋಷಣೆ ಕೂಗುತ್ತಿದ್ದರು.

ADVERTISEMENT

ರೈತ ಮುಖಂಡ ಚುನ್ನಪ್ಪ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪಕ್ಷವಿದೆ. ಇದು ರಾಜಕೀಯವಾಗಿ ಪಕ್ಷಾತೀತವಾದುದು. ಅಂತೆಯೇ ಸರ್ಕಾರ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ ₹3,300 ರೂಪಾಯಿ ಘೋಷಣೆ ಮಾಡಿತು ಎಂದರು.

ಹೋರಾಟಗಾರ ಶಿವಾಜಿ ಮೆಟಗಾರ ಅನ್ನದಾತ ರೈತ ಬೆಳೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಆ ಜೀವಕ್ಕೆ ಕಟ್ಟುವ ಬೆಲೆ ₹5 ಲಕ್ಷ ಎಂದು ವಿಷಾದ ವ್ಯಕ್ತಪಡಿಸಿ, ಕಬ್ಬು ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಲು ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಆ ಪಾರ್ಟಿ ಈ ಪಾರ್ಟಿ ಎಲ್ಲಾ ದೂರಿಟ್ಟು ರೈತರೆಲ್ಲ ಒಂದಾದರೆ ಸರ್ಕಾರ ಬಗ್ಗುತ್ತದೆ ಎಂದರು.

ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ, ಸಂತೋಷ ಪಾಟೀಲ ಡಂಬಳ, ರೈತ ಸಂಘ ಜಿಲ್ಲಾ ಪ್ರಮುಖ ಶಂಕರಗೌಡ ಹಿರೇಗೌಡರ ಮಾತನಾಡಿದರು. ರೈತ ಮುಖಂಡ ಪೀರೂ ಕೆರೂರ, ಭಾಗಪ್ಪಗೌಡ ಪಾಟೀಲ ಆಹೇರಿ, ಗಂಗಾಧರ ಚಿಂಚೊಳ್ಳಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಹಶೀಲ್ದಾರ ಕರೆಪ್ಪ ಬೆಳ್ಳಿ ಹಾಗೂ ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದರು.

ವಿಜಯಪುರ- ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಾರ ಸಂಖ್ಯೆಯಲ್ಲಿ ವಾಹನಗಳ ಸಂಚಾರ ಇರುವುದರಿಂದ ಮೋರಟಗಿ ಮತ್ತು ಸಿಂದಗಿಯಿಂದ ಮಾರ್ಗ ಬದಲಾವಣೆ ಮಾಡಿರುವುದರಿಂದ ಸಂಚಾರ ತೊಂದರೆ ಕಂಡು ಬರಲಿಲ್ಲ.

ರಾಜ್ಯದಲ್ಲಿ ಶುಗರ್ ಲಾಬಿ ಸರ್ಕಾರದ ಬುಡಕ್ಕೆ ಕೈ ಹಾಕುವಷ್ಟು ತಾಕತ್ತು ಹೊಂದಿದೆ. ಸಕ್ಕರೆ ಕಾರ್ಕಾನೆಗಳ ಮಾಲಿಕರು ಸರ್ಕಾರವನ್ನೇ ನಡುಗಿಸುತ್ತಾರೆ.
ಚುನ್ನಪ್ಪ ಪೂಜಾರಿ ಬೆಳಗಾವಿ ಜಿಲ್ಲಾ ರೈತ ಮುಖಂಡ