
ದೇವರಹಿಪ್ಪರಗಿ: ‘ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಶ್ರಮ ವಹಿಸಿ ಪಕ್ಷ ಸದೃಢಗೊಳಿಸಲು ಮುಂದಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿರುವ ದಿನಗಳಲ್ಲಿ ಕಾರ್ಯಕರ್ತರು ಸರ್ಕಾರದ ಐದು ಯೋಜನೆಗಳ ಮಹತ್ವ ಸಾರ್ವಜನಿಕರಿಗೆ ತಿಳಿಸಿ ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು ಎಂದು ತಿಳಿಸಿದರು.
ಕೆಪಿಸಿಸಿ ಮಾಜಿಸದಸ್ಯ ಸುರೇಶಗೌಡ ಬಿರಾದಾರ, ಅಕ್ಬರ್‌ಶೇಖ್, ಅಬ್ಬಾಸಲಿ, ವಸಂತ ರಾಠೋಡ, ಕಲ್ಲಪ್ಪ ಮಟ್ಟಿ(ದಿಂಡವಾರ), ಜೆ.ಎಸ್.ಪಾಟೀಲ(ಕೊಂಡಗೂಳಿ), ಸಂಗಮೇಶ ಛಾಯಾಗೋಳ, ನಬಿಲಾಲ್ ನಾಯ್ಕೋಡಿ, ಟಿಪ್ಪುಸುಲ್ತಾನ ಸಿಪಾಯಿ, ಶಂಕರ ಜಮಾದಾರ, ಸಿದ್ಧಾರ್ಥ ರೂಗಿ, ಕಮಲಸಾಬ್ ಕಾಟಮನಹಳ್ಳಿ ಮಾತನಾಡಿದರು.
ಸಭೆಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ 2028 ವಿಧಾನಸಭೆ ಅಭ್ಯರ್ಥಿಯ ಆಯ್ಕೆ ಕುರಿತು ಚರ್ಚೆ ಆರಂಭಗೊಂಡು ಗೊಂದಲದ ಗೂಡಾಯಿತು. ನಂತರ ಬಹುತೇಕರು ಸಚಿವ ಎಂ.ಬಿ.ಪಾಟೀಲ ಕುಟುಂಬದವರು ಯಾರಾದರೂ ಸ್ಪರ್ಧಿಸಲಿ, ಇಲ್ಲವಾದರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಡಾ.ಪ್ರಭುಗೌಡ ಬಿ.ಎಲ್(ಚಬನೂರ) ಅವರಿಗೆ ಅವಕಾಶ ನೀಡಲಿ ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪ್ರಭುಗೌಡ ಬಿ.ಎಲ್, ಆನಂದಗೌಡ ದೊಡ್ಡಮನಿ, ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಪಾಟೀಲ(ಸಾತಿಹಾಳ), ಅಶೋಕಗೌಡ ಪಾಟೀಲ, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ರಮೀಜಾ ನದಾಫ್ ಮಾತನಾಡಿದರು.
ಸುರೇಶಗೌಡ ಬಿರಾದಾರ(ಚಿಕ್ಕರೂಗಿ), ಸಿದ್ಧನಗೌಡ ಪಾಟೀಲ, ಶಂಕರಗೌಡ ಪಾಟೀಲ(ಯರನಾಳ), ಡಾ.ಗುರುರಾಜ್ ಗಡೇದ, ಮುರ್ತುಜಾ ತಾಂಬೋಳಿ, ಮುನೀರ್ ಬಿಜಾಪೂರ, ಸಲೀಮ್ ವಠಾರ, ಮೈನೂದ್ಧಿನ್ ಬಾಗವಾನ, ಶಫಿಕ್ ಸಿಪಾಯಿ, ಸಂಗಮೇಶ ದಂಡೋತಿ, ರಾಜಅಹ್ಮದ್ ಶಿರಸಗಿ, ವಿನಯ ಪಾಟೀಲ(ಸಾತಿಹಾಳ), ಪ್ರವೀಣ ಹುಗ್ಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.