ADVERTISEMENT

ತಳವಾರ ಪರಿವಾರ ಸೇವಾ ಸಮಿತಿ ಧರಣಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:37 IST
Last Updated 23 ನವೆಂಬರ್ 2020, 16:37 IST
ದೇವರಹಿಪ್ಪರಗಿಯಲ್ಲಿ ತಾಲ್ಲೂಕು ತಳವಾರ ಪರಿವಾರ ಸೇವಾ ಸಮಿತಿಯ ಸದಸ್ಯರು ಧರಣಿ ನಡೆಸಿದರು
ದೇವರಹಿಪ್ಪರಗಿಯಲ್ಲಿ ತಾಲ್ಲೂಕು ತಳವಾರ ಪರಿವಾರ ಸೇವಾ ಸಮಿತಿಯ ಸದಸ್ಯರು ಧರಣಿ ನಡೆಸಿದರು   

ದೇವರಹಿಪ್ಪರಗಿ: ಕಲಬುರ್ಗಿಯಲ್ಲಿ ತಳವಾರ, ಪರಿವಾರ ಹೋರಾಟ ಹತ್ತಿಕ್ಕಲು ಪೊಲೀಸರು ಕೈಗೊಂಡ ಕ್ರಮ ಖಂಡಿಸಿ ತಾಲ್ಲೂಕು ತಳವಾರ ಪರಿವಾರ ಸೇವಾ ಸಮಿತಿಯ ಸದಸ್ಯರು ಧರಣಿ ನಡೆಸಿದರು. ಉಪ ತಹಶೀಲ್ದಾರ್ ಇಂದಿರಾ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮೊಹರೆ ಹಣಮಂತರಾಯ ವೃತ್ತದಲ್ಲಿ ಸೋಮವಾರ ಸೇರಿದ ತಳವಾರ ಪರಿವಾರ ಸೇವಾ ಸಮಿತಿಯ ಸದಸ್ಯರು ಪಾದಯಾತ್ರೆಯ ಮೂಲಕ ತಹಶೀಲ್ದಾರ್ ಕಚೇರಿ ತಲುಪಿ ಧರಣಿ ಕುಳಿತರು.

ಇಂಡಿ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ಧರಾಮ ತಳವಾರ, ಶಂಕರ ಜಮಾದಾರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, ಕಲಬುರ್ಗಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ತಳವಾರ ಮತ್ತು ಪರಿವಾರ
ಸಮುದಾಯದವರು ಕಾನೂನು ಬದ್ಧವಾದ ತಮ್ಮ
ಹಕ್ಕಿಗಾಗಿ 86 ದಿನಗಳ ನಿರಂತರ ಧರಣಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇದನ್ನು ಹತ್ತಿಕ್ಕಲು ಅಲ್ಲಿನ
ಪೊಲೀಸ್ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ. ಇದನ್ನು ತಳವಾರ ಪರಿವಾರ ಸೇವಾ ಸಮಿತಿ
ಖಂಡಿಸುತ್ತದೆ ಎಂದರು.

ADVERTISEMENT

ಸೇವಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಮೆಟಗಾರ, ಸಾಯಬಣ್ಣಾ ಬಾಗೇವಾಡಿ, ಅರವಿಂದ ನಾಯ್ಕೋಡಿ, ಆಕಾಶ ಬೂದಿಹಾಳ, ಶಿವಾನಂದ ನಾಟೀಕಾರ, ಸಂಪತ್ ಜಮಾದಾರ, ಅಶೋಕ ಮಣೂರ, ಅಡಿವೆಪ್ಪ ಮೆಟಗಾರ, ದಯಾನಂದ ಬೂದಿಹಾಳ, ಚಿದಾನಂದ ಮಾಲಗಾರ, ಗೊಲ್ಲಾಳ ಅಂಗಡಿ, ಶಂಕರಗೌಡ ಪಾಟೀಲ, ಶಿವರಾಜ್ ತಳವಾರ, ಮಲ್ಲು ನಾಟೀಕಾರ, ಮುತ್ತು ಮೆಟಗಾರ, ದಶರಥ ನಾಟೀಕಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.