ತಾಳಿಕೋಟೆ: ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ತಹಶೀಲ್ದಾರ್ ವಿನಯಾ ಹೂಗಾರ ಅವರು ಗುರುವಾರ ಭೇಟಿ ನೀಡಿದರು.
ಧರಣಿ ಹಿಂಪಡೆಯುವಂತೆ ಪ್ರತಿಭಟನಕಾರರ ಮನವೊಲಿಸುವ ಯತ್ನಿಸಿದರು. ಆದರೆ, ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸುವುದಾಗಿ ಮುಖಂಡರು ಪಟ್ಟುಹಿಡಿದರು.
‘ಎರಡು ವರ್ಷಗಳಿಂದ ಈ ಕುರಿತು ಮನವಿ ಸಲ್ಲಿಸಲಾಗುತ್ತಿದೆ. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ನಮ್ಮ ಮನವಿಗೆ ಸ್ಪಂದಿಸದ ಪರಿಣಾಮ ಕಲಕೇರಿ ಗ್ರಾಮ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಜಿಲ್ಲಾಧಿಕಾರಿ ಅವರು ಖುದ್ದು ಇಲ್ಲಿಗೆ ಭೇಟಿ ನೀಡಬೇಕಿದೆ’ ಎಂದರು.
‘ಜೂನ್ 2ರೊಳಗೆ ಜಿಲ್ಲಾಧಿಕಾರಿ ಅವರು ಇಲ್ಲಿಗೆ ಬರದಿದ್ದರೆ 3ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಡಿ.ಜಿ.ಸಾಗರ ಬಣ) ವೈ.ಸಿ. ಮಯೂರ, ಸಂತೋಷ ಮನಗೇರಿ, ಸೋಮಶೇಖರ ಬಡಿಗೇರ, ಯಮನೂರಿ ಸಿಂಧಗಿರಿ, ಮಲ್ಲಪ್ಪ ನಡುವಿನಕೇರಿ, ಸಿದ್ದು ಪೂಜಾರಿ, ಬಸವರಾಜ ಹ. ಗುಡಸಲಮನಿ, ದೇವೇಂದ್ರ ವಡ್ಡರ, ಪ್ರಕಾಶ ನಡುವಿಕೇರಿ, ಆನಂದ ಹೊಸಮನಿ, ಅನಿಲ ಹಚ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.